ಹಿಂದೂ ಧರ್ಮದ ಪ್ರಕಾರ ವಾರದ ಏಳು ದಿನಗಳನ್ನು ಒಂದೊಂದು ದೇವರ ದಿನವೆಂದು ಪರಿಗಣಿಸಲಾಗಿದೆ
ಸೋಮವಾರ ಶಿವ ದೇವರಿಗೆ ಪೂಜೆ ಮಾಡುವುದರ ಮೂಲಕ ದಿನವನ್ನು ಶುರುಮಾಡುತ್ತಾರೆ
ಹಾಗಿದ್ರೆ ಮಂಗಳವಾರ ಯಾವ ದೇವರನ್ನು ಪೂಜಿಸಬೇಕು ಅಂತ ತಿಳಿಯೋಣ ಬನ್ನಿ
ಸನಾತನ ಧರ್ಮದ ಪ್ರಕಾರ ಮಂಗಳವಾರವನ್ನು ಅಂಜನಿ ಪುತ್ರ ಹನುಮಂತನನ್ನು ಪೂಜಿಸುವ ಶುಭ ದಿನವಾಗಿದೆ
ಹಿಂದೂ ಪುರಾಣಗಳಲ್ಲಿ ಹನುಮಂತನನ್ನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ
ಜೀವನದ ಅಡೆತಡೆಗಳನ್ನು ಮತ್ತು ಭಯವನ್ನು ದೂರ ಮಾಡಲು ಮಂಗಳವಾರ ಹನುಮನನ್ನು ಪೂಜಿಸಬೇಕು
ಮಂಗಳವಾರ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಹನುಮನಿಗೆ ಇಷ್ಟವಾದ ಕೆಂಪು ಅಥವಾ ಕೇಸರಿ ಬಣ್ಣದ ಶುದ್ಧ ಬಟ್ಟೆಯನ್ನು ಧರಿಸಿ, ಸೂರ್ಯನಿಗೆ ಮೊದಲು ಅರ್ಘ್ಯವನ್ನು ಅರ್ಪಿಸಿ ಹನುಮಾನ್ ಚಾಲೀಸಾವನ್ನು ಪಠಿಸಬೇಕು
ಹೀಗೆ ಮಾಡಿದ್ರೆ ಮನದ ಇಚ್ಛೆ ಇಡೇರುತ್ತದೆ
ನಿರೀಕ್ಷಿತ ಶುಭ ಸುದ್ದಿ ಹುಡುಕಿ ಬರುತ್ತೆ, ಖುಷಿ ಡಬಲ್ ಆಗುತ್ತೆ