ಯಾವುದೇ ಸಂಬಂಧಗಳು ಗಟ್ಟಿಯಾಗಿರಬೇಕಂದರೆ ಬಾರ್ಡರ್​​ಗಳನ್ನು ಹಾಕಿಕೊಳ್ಳುವುದು ಬಹಳ ಮುಖ್ಯ

ಇದು ನಿಮ್ಮ ಅಗತ್ಯಗಳೇನು ಎಂಬುದನ್ನು ತಿಳಿಸಲು ನಿಮ್ಮ ಸಂಗಾತಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ

ನಿಮ್ಮ ಜೀವನ ಸುಖಕರವಾಗಿರಬೇಕೆಂದು ಬಯಸಿದರೆ, ನಿಮ್ಮ ಸಂಬಂಧಗಳು ಚೆನ್ನಾಗಿರುವುದು ಬಹಳ ಮುಖ್ಯ. ನಿಮ್ಮನ್ನು ಯಾವಗಲೂ ಗೌರವಿಸುವ ಸಂಗಾತಿಯೊಂದಿಗೆ ನೀವಿದ್ದರೆ, ನಿಮ್ಮ ದೇಹದ ಕಾರ್ಟಿಸೋಲ್ (ಒತ್ತಡವನ್ನು ಉಂಟುಮಾಡುವ ಹಾರ್ಮೋನ್) ಕಡಿಮೆಯಾಗುತ್ತದೆ

 ಇಷ್ಟೇ ಅಲ್ಲದೇ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಹೆಚ್ಚು ಕಾಲ ಬದುಕಿರಲು ಸಹಾಯ ಮಾಡುತ್ತದೆ

ಯಾವುದೇ ಸಂಬಂಧಗಳು ಗಟ್ಟಿಯಾಗಿರಬೇಕಂದರೆ ಬಾರ್ಡ್ರ್ಗಳನ್ನು ಹಾಕಿಕೊಳ್ಳುವುದು ಬಹಳ ಮುಖ್ಯ. ಇದು ನಿಮ್ಮ ಅಗತ್ಯಗಳೇನು ಎಂಬುದನ್ನು ತಿಳಿಸಲು ನಿಮ್ಮ ಸಂಗಾತಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ

ಉತ್ತಮ ರಿಲೇಶನ್ ಶಿಪ್ಗಾಗಿ ಏನನ್ನು ಮಾಡಬೇಕು ಅಂತ ತಿಳಿದುಕೊಳ್ಳೋಣ ಬನ್ನಿ

ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಲು ನೀವು ಬಯಸಿದರೆ, ಮೊದಲು ನಿಮ್ಮ ಬಗ್ಗೆ ನಿಜವಾದ ಕಾಳಜಿಯನ್ನು ತೆಗೆದುಕೊಳ್ಳಬೇಕು. ನಿಮ್ಮ ಸಮಯ ಮತ್ತು ಅವಧಿಯನ್ನು ಮೌಲ್ಯೀಕರಿಸಿ. ನಿಮ್ಮ ನಿರೀಕ್ಷೆಗಳೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ

ವ್ಯಾಯಾಮ, ವಿಶ್ರಾಂತಿ, ಆರೋಗ್ಯಕರ ಆಹಾರವನ್ನು ತಿನ್ನುವುದು ಮತ್ತು ಚೆನ್ನಾಗಿ ನಿದ್ರೆ ಮಾಡುವ ಮೂಲಕ ನಿಮ್ಮನ್ನು ನೀವು ನೋಡಿಕೊಳ್ಳಿ. ಆಗ ಮಾತ್ರ ನಿಮ್ಮ ಸಂಬಂಧವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೋಡಿಕೊಳ್ಳಲು ನೀವು ಸಿದ್ಧರಾಗಿರುತ್ತೀರಿ

ನಿಮ್ಮ ಸಂಗಾತಿಯಿಂದ ಯಾವಾಗಲೂ ಗೌರವವನ್ನು ನಿರೀಕ್ಷಿಸಿ. ಪ್ರತಿಯೊಂದು ರಿಲೇಶನ್ ಶಿಪ್ನಲ್ಲಿಯೂ ಜಗಳಗಳು ಮತ್ತು ಗಲಾಟೆಗಳಾಗುವುದು ಕಾಮನ್. ಆದರೆ ಅಗೌರವ ತೋರುವವರನ್ನು ಎಂದಿಗೂ ಕ್ಷಮಿಸಬೇಡಿ

ಯಾವಾಗಲೂ ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಿ, ನಾವು ಯಾರೊಂದಿಗಾದರೂ ರಿಲೇಶನ್ ಶಿಪ್ನಲ್ಲಿರಲಿ, ನಮಗೆ ಸಮಂಜಸವಾದ ಗಡಿಗಳು ಬೇಕಾಗುತ್ತವೆ. ನಿಮಗೆ ಏನು ಬೇಕು ಮತ್ತು ಅಗತ್ಯವಿಲ್ಲ ಎಂಬುದರ ಕುರಿತು ಸ್ಪಷ್ಟವಾಗಿ ತಿಳಿದುಕೊಂಡಿರಿ