Fill in some text
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್
ನಲ್ಲಿ ಗೇ್ಮ್ ಫಿನಿಶರ್ ಎಂದೇ ಫೇಮಸ್
ಭಾರತಕ್ಕೆ 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ನೀಡಿದ ಕ್ಯಾಪ್ಟನ್
ನಾಯಕ ಹಾಗೂ ಫಿನಿಶರ್ ಪಾತ್ರವನ್ನ ಧೋನಿ ಉತ್ತಮವಾಗಿ ನಿರ್ವಹಿಸಿದ್ದಾರೆ.
ಕೊನೆಯವರೆಗೂ ಇದ್ದು ಹಲವು ಪಂದ್ಯಗಳನ್ನ ಏಕಾಂಗಿಯಾಗಿ ಗೆಲ್ಲಿಸಿಕೊಂಡಿದ್ದಾರೆ.
ಆದರೆ ಧೋನಿ ನಿವೃತ್ತಿಯ ನಂತರ ಭಾರತ ತಂಡದಲ್ಲಿ ಫಿನಿಶರ್ ಪಾತ್ರ ನಿರ್ವಹಿಸುವವರ ಅನುಪಸ್ಥಿತಿ ಕಾಣುತ್ತಿದೆ
ಆದರೆ ಬಹಳ ವರ್ಷಗಳ ನಂತರ ಟೀಂ ಇಂಡಿಯಾಗೆ ರಿಂಕು ಸಿಂಗ್ ರೂಪದಲ್ಲಿ ಸೂಪರ್ ಫಿನಿಶರ್ ಸಿಕ್ಕಿದ್ದಾರೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡಿರುವ ರಿಂಕು ಸಿಂಗ್ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿದ್ದಾರೆ.
ಅಂತರಾಷ್ಟ್ರೀಯ ಟಿ20ಯಲ್ಲಿ ಕೇವಲ 6 ಪಂದ್ಯಗಳನ್ನಾಡಿರುವ ರಿಂಕು, ಟೀಂ ಇಂಡಿಯಾದ ಭವಿಷ್ಯದ ಫಿನಿಶರ್ ಎಂದೇ ಖ್ಯಾತಿ ಪಡೆದಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಕೊನೆಯ ಓವರ್
ನಲ್ಲಿ ಫಿನಿಶ್ ಮಾಡಿದ್ದರು.
ಸಿಕ್ಸರ್ ಮೂಲಕ ಪಂದ್ಯವನ್ನು ಮುಗಿಸಿ ಭಾರತಕ್ಕೆ ಮುನ್ನಡೆ ಗೆಲುವು ತಂದುಕೊಟ್ಟಿದ್ದರು
ಈ ವರ್ಷದ ಐಪಿಎಲ್ನಲ್ಲಿ ಕೆಕೆಆರ್ಗಾಗಿ ರಿಂಕು ಸಿಂಗ್ ಅಮೋಘ ಪ್ರದರ್ಶನ ತೋರಿದ್ದರು.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ರೋಚಕ ಜಯ ತಂದುಕೊಟ್ಟಿದ್ದರು
ಇದೀಗ ಟೀಮ್ ಇಂಡಿಯಾ ಪರವೂ ಅದೇ ಜವಾಬ್ದಾರಿ ನಿರ್ವಹಿಸಿ ಭರವಸೆ ಮೂಡಿಸುತ್ತಿದ್ದಾರೆ