ಅನೇಕ ಮಂದಿ ಮೊಟ್ಟೆ ಒಡೆದು ಕುಡಿದರೆ ಒಳ್ಳೆಯದಾ? ಬೇಯಿಸಿ ತಿನ್ನುವುದು ಉತ್ತಮನಾ? ಇಲ್ಲದಿದ್ದರೆ ಆಫ್ ಬಾಯ್ಡ್ ಮಾಡಿಕೊಂಡು ತಿನ್ನಬೇಕಾ? ಎಂಬ ಗೊಂದಲ ಹೊಂದಿದ್ದಾರೆ
ಹಾಗಾಗಿ ನಾವಿಂದು ಈ ಕುರಿತ ಕೆಲವೊಂದಷ್ಟು ಮಾಹಿತಿಯನ್ನು ನೀಡುತ್ತೇವೆ
ಮೊಟ್ಟೆಗಳು ಸಸ್ಯಾಹಾರಿಗಳಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀಡುವ ಪೋಷಕಾಂಶಗಳ ನಿಧಿ ಎಂದು ಹೇಳಲಾಗುತ್ತದೆ
ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯವಾಗಿರಬಹುದು ಎಂದು ಹೇಳಲಾಗುತ್ತದೆ
ಮೊಟ್ಟೆಗಳು ನಮ್ಮ ಜೀವನದಲ್ಲಿ ಅತ್ಯಂತ ಅಗ್ಗದ ಮತ್ತು ಪೌಷ್ಟಿಕ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ
ಇದು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವುದರಿಂದ ಮಾಂಸಾಹಾರಿಗಳಷ್ಟೇ ಅಲ್ಲದೇ ಕೆಲ ಸಸ್ಯಾಹಾರಿಗಳು ಕೂಡ ಸೇವಿಸುತ್ತಾರೆ. ಒಟ್ಟಾರೆ ಜಗತ್ತಿನಾದ್ಯಂತ ಮೊಟ್ಟೆಯನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ
ಮೊಟ್ಟೆಯನ್ನು ಸುಲಭವಾಗಿ ತಯಾರಿಸಬಹುದಾದ ಆಹಾರವಾಗಿದ್ದು, ಇದನ್ನು ಬೇಯಿಸದೇ ಹಸಿಯಾಗಿ ಕೂಡ ಸೇವಿಸಬಹುದು
ಮೊಟ್ಟೆ ಪ್ರೋಟೀನ್ ರೈಬೋಫ್ಲಾವಿನ್, ಫೋಲೇಟ್, ಕಬ್ಬಿಣ, ರಂಜಕ, ಸೆಲೆನಿಯಮ್, ಮೆಗ್ನೀಸಿಯಮ್, ವಿಟಮಿನ್ ಎ, ಇ, ಬಿ 6 ಸೇರಿದಂತೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ
ಅವು ಸ್ನಾಯು ಮತ್ತು ಅಂಗಾಂಶಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ
ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಮೊಟ್ಟೆಗಳನ್ನು ಪ್ರತಿದಿನ ತಿನ್ನುವುದರಿಂದ ನಮ್ಮ ದೇಹದಲ್ಲಿನ ಮೂಳೆಗಳ ಬಲವು ಹೆಚ್ಚಾಗುತ್ತದೆ
ಮೊಟ್ಟೆಗಳಲ್ಲಿ ಕ್ಯಾರೊಟಿನಾಯ್ಡ್ಗಳು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಸಮೃದ್ಧವಾಗಿದೆ
ನಿಜಕ್ಕೂ ಬೇಯಿಸಿದ ಮೊಟ್ಟೆ ಉತ್ತಮವೋ ಅಥವಾ ಬೇಯಿಸದ ಹಸಿ ಮೊಟ್ಟೆ ಉತ್ತಮವೋ? ಎಂದು ಅನೇಕ ಮಂದಿ ಗೊಂದಲಕ್ಕೆ ಆಫ್-ಬಾಯ್ಲ್ಡ್ ಮೊಟ್ಟೆ ಬೆಸ್ಟ್ ಎಂದೇ ಹೇಳಬಹುದು. ಮೊಟ್ಟೆಯಲ್ಲಿರುವ ಕೋಲೀನ್ ನರಮಂಡಲ ಮತ್ತು ಹೃದಯರಕ್ತನಾಳದ ವ್ಯವಸ್ಥೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ
ಯಶಸ್ಸು ಕಂಡ ಜನರು ಪ್ರತಿನಿತ್ಯ ಫಾಲೋ ಮಾಡೋ ಅಭ್ಯಾಸಗಳಿವು!
ಪುರುಷರು ಹೊರಗಿನವರೊಂದಿಗೆ ಅಫೇರ್ ಇಟ್ಟುಕೊಳ್ಳಲು ಪ್ರಮುಖ ಕಾರಣಗಳು ಇವೇ ಅಂತೆ!