ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರ ಅನೇಕ ಮಹಿಳೆಯರಿಗೆ ಅಪಾಯವನ್ನು ಉಂಟು ಮಾಡಬಹುದು.

ಮಹಿಳೆಯರಿಗೆ ತಾವು ಗರ್ಭಿಣಿಯಾಗಿರುವಾಗ ಬೆಂಡೆಕಾಯಿ ತಿನ್ನಬಹುದೇ ಎಂಬ ಗೊಂದಲವಿದೆ.

ಬೆಂಡೆಕಾಯಿಯು ಪ್ರೋಟೀನ್ಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಿಣ್ವಗಳು ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ.

ಪೋಷಕಾಂಶಗಳನ್ನು ಹೊಂದಿರುವ ಬೆಂಡೆಕಾಯಿಯನ್ನು ಗರ್ಭಿಣಿಯರು ತಿಂದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದ್ಯಾ?

ಬೆಂಡೆಕಾಯಿಯಲ್ಲಿ ನಾರಿನಂಶ ಅಧಿಕವಾಗಿದೆ. ಗರ್ಭಾವಸ್ಥೆಯಲ್ಲಿ ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸುತ್ತದೆ.

ಹಾಗಾಗಿ ವಾರಕ್ಕೆರಡು ಬಾರಿಯಾದರೂ ಬೆಂಡೆಕಾಯಿಯನ್ನು ತಿನ್ನಬೇಕು ಎಂದು ಹೇಳಲಾಗುತ್ತದೆ.

ಬೆಂಡೆಕಾಯಿಯಲ್ಲಿ ವಿಟಮಿನ್ ಬಿ9, ಎ, ಬಿ, ಸಿ ಇತ್ಯಾದಿ ಇರುತ್ತದೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದು ಹುಟ್ಟುವ ಮಗುವಿನ ಆರೋಗ್ಯ ಮತ್ತು ನರಮಂಡಲಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಬೆಂಡೆಕಾಯಿಯನ್ನು ಸೇವಿಸುವುದರಿಂದ ಗರ್ಭಿಣಿಯರಲ್ಲಿ ಹಸಿವಿನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

ಹಾಗಾಗಿ ಗರ್ಭಾವಸ್ಥೆಯಲ್ಲಿ ಇದನ್ನು ಖುಷಿಯಾಗಿ ನೀವು ತಿನ್ನಬಹುದು ಎಂದು ತಜ್ಞರು ಹೇಳುತ್ತಾರೆ.

ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಿ; ಬಾಡಿ ಕೂಲ್ ಅಷ್ಟೇ ಅಲ್ಲ, ಈ ಎಲ್ಲಾ ಸಮಸ್ಯೆಯೂ ದೂರವಾಗುತ್ತೆ!