ಶಾಂತಿಯೆಂದರೆ ಕೇವಲ ಯುದ್ಧ ಇಲ್ಲದಿರುವುದೆ? 

ಜಾಗತಿಕ ಆಧ್ಯಾತ್ಮಿಕ ಗುರುಗಳಾದ, ಶಾಂತಿಯ ನಾಯಕರಾದ ಗುರುದೇವ ಶ್ರೀ ಶ್ರೀ ರವಿಶಂಕರರು ನಮ್ಮ ಜೀವನಗಳಲ್ಲಿ ಶಾಂತಿಯ ಮೌಲ್ಯ ಮತ್ತು ಅವುಗಳ ಸಾರದ ಬಗ್ಗೆ ನೀಡಿರುವ ಕಾಲಾತೀತವಾದ ಕೆಲವು ಉಕ್ತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಕೇವಲ ಉನ್ನತ ಹುದ್ದೆ ಕುಳಿತು  ಕಾನೂನು-ನಿಯಮಗಳನ್ನು ಮಾಡುವುದರಿಂದ ವಿಶ್ವ ಶಾಂತಿ ಉಂಟಾಗಲು ಸಾಧ್ಯವಿಲ್ಲ. ನಾವೆಲ್ಲಿ ಇರುವೆವೋ, ಅಲ್ಲಿಂದಲೇ ವಿಶ್ವ ಶಾಂತಿಯು ಆರಂಭವಾಗುತ್ತದೆ. ಶಾಂತನಾದ ವ್ಯಕ್ತಿಗಳಿಂದ, ವಿಶ್ವ ಶಾಂತಿಯು ಉಂಟಾಗುತ್ತದೆ. 

ಶಾಂತಿಯು ನಮ್ಮೊಳಗಿನ ಒಂದು ಸಕಾರಾತ್ಮಕವಾದ ವಿದ್ಯಮಾನ. ಜನರು ಆಂತರ್ಯದಲ್ಲಿ ಶಾಂತಿಯನ್ನು ಕಂಡುಕೊಳ್ಳಬಲ್ಲವರಾದರೆ, ಆಗ ಬಾಹ್ಯದಲ್ಲಿ ಶಾಂತಿಯು ಸಾಕಾರವಾಗುತ್ತದೆ. ವಿಶ್ವಶಾಂತಿಗೆ ಇದೇ ದಾರಿ.

ಉದ್ರಿಕ್ತತೆಯನ್ನು, ಇಂದು ಬಹಳ ಹೆಮ್ಮೆಯ ವಿಷಯವಾಗಿ ಪರಿಗಣಿಸಲಾಗುತ್ತದೆ. ಹಿಂಸೆಯು ನಮ್ಮ ಸ್ವಭಾವವೂ ಅಲ್ಲ; ಅದು ನಾಗರಿಕತೆಯ ಆಧಾರವೂ ಅಲ್ಲ. ನಾವು ಶಾಂತಿಯುತರಾಗಿರುವುದರ ಬಗ್ಗೆ ಹೆಮ್ಮೆಯ ಭಾವವನ್ನು ಮತ್ತೆ ತರಬೇಕಾಗಿದೆ.

ನಾವು ಹೆಚ್ಚಾಗಿ ನಮ್ಮ ವ್ಯಕ್ತಿತ್ವದಿಂದ (vibration) ವ್ಯಕ್ತವಾಗುತ್ತೇವೆ. ನಾವು ಶಾಂತಿಯಿಂದಿದ್ದಾಗ, ನಮ್ಮ ಉಪಸ್ಥಿತಿಯಿಂದಲೇ ಹಿಂಸೆಯು ಇಲ್ಲವಾಗುತ್ತದೆ.     

ಸಂಪರ್ಕವು ಕಡಿದಾಗ ಸಂಘರ್ಷಗಳು ಉಂಟಾಗುತ್ತವೆ. ಆದರೆ ಶಾಂತಿ, ಪ್ರೀತಿ ಮತ್ತು ಸಹನೆಯಿಂದ ಮತ್ತೆ ಸಂಪರ್ಕವನ್ನು ಸಾಧಿಸಬಲ್ಲೆವಾದರೆ, ಆಳವಾಗಿ ಬೇರೂರಿರುವ ಒತ್ತಡಗಳನ್ನೆಲ್ಲಾ ನೀಗಿಸಬಹುದು.

ಸಂಘರ್ಷ ಮತ್ತು ಉದ್ರಿಕ್ತತೆಗಳೇ ದೊಡ್ಡ ಸುದ್ದಿಯಾಗಿ ಹರಡಿರುವ ಇಂದಿನ ಜಗತ್ತಿನಲ್ಲಿ, ಶಾಂತಿ-ಅಹಿಂಸೆಯ ಕೂಗು ಜೋರಾಗಿ ಮೊಳಗಬೇಕು. ನಾವು ಸಾಕಷ್ಟು ಜನರು "ನಾನು ಶಾಂತಿಯ ಪರ" ಎಂದಾಗ, ಅದು ಸಾಮೂಹಿಕ ಸಂಕಲ್ಪವಾಗಿ, ಶಾಂತಿಯ ಸ್ಥಾಪನೆಯಾಗುತ್ತದೆ.

ನಮ್ಮಿಂದ ಯಾವ ರೀತಿಗಳಲ್ಲೆಲ್ಲಾ ಸಾಧ್ಯವೋ, ಅಷ್ಟು, ನಮ್ಮ ಸುತ್ತಲ್ಲಿರುವ ಜನರ ಕಾಳಜಿವಹಿಸಿಸೋಣ.   ಜನರೆಲ್ಲರೂ, ಕೇವಲ ಹದಗೆಟ್ಟ ಪರಿಸ್ಥಿತಿಯನ್ನೇ ಆಲೋಚಿಸುತ್ತಾ, ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳೋಣ.    

ಕೇವಲ ವೈಯಕ್ತಿಕ ಶಾಂತಿಯಿಂದಲೇ, ಸಾಮೂಹಿಕ ಶಾಂತಿಯನ್ನು ಮತ್ತು ರಾಷ್ಟ್ರಗಳ ನಡುವೆ ಶಾಂತಿಯನ್ನು ತರಲು ಸಾಧ್ಯ.

Pitru Paksha 2024: ಪಿತೃಪಕ್ಷದಲ್ಲಿ ಪಿತೃಗಳು ಖುಷಿಯಾಗಿ ಅಸ್ತು ಎನ್ನಬೇಕಾ? ಹಾಗಾದ್ರೆ ಈ 6 ವಸ್ತುಗಳನ್ನು ಮನೆಗೆ ತನ್ನಿ!