ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 80 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಎರಡನೇ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಮೂಲಕ ಮತ್ತೊಮ್ಮೆ ಇಂಗ್ಲೆಂಡ್ ಆಟಗಾರರಿಗೆ ಬೆವರಿಳಿಸಿದ್ದರು

 ಇದು ಅವರ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಮೊದಲ ದ್ವಿಶತಕವಾಗಿತ್ತು

ಯಶಸ್ವಿಯ ಈ ಪ್ರದರ್ಶನದ ನಂತರ, ಇದೀಗ ಜೈಸ್ವಾಲ್​ ಮುಂದಿನ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್​ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ

ಇಲ್ಲಿಯೂ ಜೈಸ್ವಾಲ್​ ಮತ್ತೊಮ್ಮೆ ಅಬ್ಬರಿಸುವ ನಿರೀಕ್ಷೆಯಿದ್ದು, ಫೆಬ್ರವರಿ 15ರಿಂದ ಪಂದ್ಯ ಆರಂಭವಾಗಲಿದೆ

4 ಗಂಟೆಗಳ ಕಾಲ ಡ್ರೆಸ್ಸಿಂಗ್ ರೂಂನಲ್ಲಿದ್ದೆ, ರನೌಟ್ ಬಗ್ಗೆ ಮೌನಮುರಿದ ಸರ್ಫರಾಜ್​ ಖಾನ್​

ಇದರ ನಡುವೆ ಪ್ರಸ್ತುತ ಮ್ಯಾಡಿ ಹ್ಯಾಮಿಲ್ಟನ್ ಅವರ ಹೆಸರಿನ ಹುಡುಗಿಯ ಫೋಟೋ ವೈರಲ್ ಆಗುತ್ತಿದೆ

ಈ ಹುಡುಗಿ ಯಶಸ್ವಿ ಜೈಸ್ವಾಲ್ ಅವರ ಗೆಳತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳಲಾಗುತ್ತಿದೆ

ಆದರೆ ಇವರಿಬ್ಬರ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ

ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ಪಂದ್ಯದ ವೇಳೆ ಮ್ಯಾಡಿ ಹ್ಯಾಮಿಲ್ಟನ್ ಜೈಸ್ವಾಲ್​ ಅವರನ್ನು ಬೆಂಬಲಿಸಲು ಸ್ಟ್ಯಾಂಡ್‌ನಲ್ಲಿ ಕುಳಿತಿರುವುದು ಕಂಡುಬಂದಿತ್ತು

ಇದಾದ ನಂತರವೇ ಆಕೆಯ ಹೆಸರು ಜೈಸ್ವಾಲ್​ ಹೆಸರಿನೊಂದಿಗೆ ತಳಕು ಹಾಕಿಕೊಂಡಿತು. ಯಶಸ್ವಿ ಜೈಸ್ವಾಲ್ ಸುಮಾರು ಒಂದು ವರ್ಷದ ಹಿಂದೆ Instagram ಪೋಸ್ಟ್ ಅನ್ನು ಹಂಚಿಕೊಂಡಿದ್ದರು

ಕಾಣಿಸಿಕೊಂಡ ಇಬ್ಬರು ಮಹಿಳೆಯರಲ್ಲಿ ಓರ್ವ ಯುವತಿ ಮ್ಯಾಡಿ ಹ್ಯಾಮಿಲ್ಟನ್ ಅವರ ಫೋಟೋ ಪ್ರಸ್ತುತ ವೈರಲ್ ಆಗುತ್ತಿದೆ

ಮ್ಯಾಡಿ ಹ್ಯಾಮಿಲ್ಟನ್ ಮತ್ತು ಯಶಸ್ವಿ ಜೈಸ್ವಾಲ್ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ

ಮ್ಯಾಡಿ ಹ್ಯಾಮಿಲ್ಟನ್ ಕೂಡ ಐಪಿಎಲ್ ಸಮಯದಲ್ಲಿ ಯಶಸ್ವಿ ಅವರನ್ನು ಹುರಿದುಂಬಿಸುತ್ತಿದ್ದರು

ಇವುಗಳೆಲ್ಲಾ ಕೇವಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ರೂಮರ್ಸ್​ ಆಗಿದ್ದು, ಇವರಿಬ್ಬರ ಸಂದಂಭದ ಬಗ್ಗೆ ಈವರೆಗ ಯಾವುದೇ ಅಧಿಕೃತ ಮಾಹಿತಿ ಲಬ್ಯವಾಗಿಲ್ಲ

ಭರ್ಜರಿ ಶತಕದ ಮೂಲಕ ದಿಗ್ಗಜರ ದಾಖಲೆ ಸರಿಗಟ್ಟಿದ ಜಡೇಜಾ, ಇಂಗ್ಲೆಂಡ್ ವಿರುದ್ಧ ಹೊಸ ಇತಿಹಾಸ ನಿರ್ಮಾಣ