ಹಲಸಿನ ಹಣ್ಣಿನಲ್ಲಿದ್ಯಂತೆ ಮಾಂಸದಷ್ಟೇ ಪೋಷಕಾಂಶ!
ಹಲಸಿನ ಹಣ್ಣು ಪೋಷಕಾಂಶಗಳು ಮತ್ತು ಪ್ರೋಟೀನ್ಗಳ ಅತ್ಯುತ್ತಮ ಮೂಲವಾಗಿದೆ.
ಹಲಸಿನ ಹಣ್ಣು ಮೇಲ್ನೋಟಕ್ಕೆ ಒರಟಾಗಿ ಕಂಡರೂ ಒಳಗಿರುವ ಹಣ್ಣು ಮೃದು ಮತ್ತು ರುಚಿಕರವಾಗಿದೆ.
ಇದಲ್ಲದೇ ಹಲಸಿನ ಹಣ್ಣಿನ ಪ್ರತಿಯೊಂದು ಭಾಗವು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಮಾಂಸಕ್ಕಿಂತ ಸಸ್ಯ ಆಧಾರಿತ ಆಹಾರಗಳು ನಮ್ಮ ಹೃದಯಕ್ಕೆ ಆರೋಗ್ಯಕರವೆಂದು ತಜ್ಞರು ಹೇಳುತ್ತಾರೆ.
ಮಾಂಸವನ್ನು ಹೋಲುವ ಈ ಹಲಸಿನ ಹಣ್ಣನ್ನು ಅನೇಕ ಅಡುಗೆಗಳಿಗೆ ವ್ಯಾಪಕವಾಗಿ ಬಳಸಲಾಗುತ್ತದೆ.
ಸಾಮಾನ್ಯವಾಗಿ ಹಲಸಿನ ಹಣ್ಣಿನ್ನು ಕೊಯ್ದ ನಂತರ ಅದು ಮಾಂಸದಂತೆಯೇ ಕಾಣಿಸುತ್ತದೆ.
ಹಲಸಿನ ಹಣ್ಣಿನಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ.
ಇದರ ತಟಸ್ಥ ಪರಿಮಳವು ಎಲ್ಲಾ ರೀತಿಯ ಮಸಾಲೆಗಳೊಂದಿಗೆ ಉತ್ತಮವಾಗಿರುತ್ತದೆ.
ಸಸ್ಯಾಧಾರಿತ ಆಹಾರಗಳನ್ನು ಮಾತ್ರ ಸೇವಿಸಲು ಇಷ್ಟಪಡುವ ಜನರಿಗೆ ಹಲಸು ಬಹಳ ಜನಪ್ರಿಯವಾಗಿದೆ.
ಮಾಂಸ ಮತ್ತು ತರಕಾರಿ ಅಡುಗೆ ಮಾಡುವವರು ಹಲಸಿನ ಹಣ್ಣನ್ನು ಉಪಯೋಗಿಸಬಹುದು.