ಸದ್ದೇ ಇಲ್ಲದೆ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾರ್ಟಿನ್ ಹೀರೋಯಿನ್

ಮಾರ್ಟಿನ್ ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಹು ದಿನಗಳ ಗೆಳೆಯ ಹಾಗೂ ಬಾಲಿವುಡ್ ಕ್ಯಾಮರಾಮನ್ ಹರ್ವಷರ್ಧನ್ ಜೊತೆಗೆ ಮದುವೆ ಆಗಿದ್ದಾರೆ.

ಸಿಂಪಲ್ಲಾಗಿಯೇ ಮದುವೆ ಆದ ಇವರ ವಿವಾಹದ ಒಂದಷ್ಟು ವಿಶೇಷ ಫೋಟೋಸ್ ಇಲ್ಲಿವೆ ನೋಡಿ.

ವೈಭವಿ ಶಾಂಡಿಲ್ಯ ತಮ್ಮ ಮದುವೆಯನ್ನ ಹೆಚ್ಚು ವೈಭವದಿಂದಲೇ ಮಾಡಿಕೊಂಡಿಲ್ಲ.

ಕೆಲವೇ ಕೆಲವು ಸ್ನೇಹಿತರು ಮತ್ತು ಎರಡೂ ಮನೆಯವರ ಸಮ್ಮುಖದಲ್ಲಿಯೇ ಮ್ಯಾರೇಜ್ ಆಗಿದ್ದಾರೆ.

ಫೆಬ್ರವರಿ-21 ರಂದು ಶುಕ್ರವಾರ ವೈಭವಿ ಶಾಂಡಿಲ್ಯ ಹಾಗೂ ಹರ್ಷವರ್ಧನ್ ಮದುವೆ ಆಗಿದ್ದಾರೆ.

ಎರಡೂ ಮನೆಯವರನ್ನ ಒಪ್ಪಿಸಿಯೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ವೈಭವಿ ಶಾಂಡಿಲ್ಯ ರಾಜ್ ವಿಷ್ಣು ಚಿತ್ರದ ಮೂಲಕ ಕನ್ನಡದಲ್ಲಿ ಜರ್ನಿ ಆರಂಭಿಸಿದ್ದರು.

ಮಾರ್ಟಿನ್ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಜೋಡಿ ಆಗಿದ್ದರು.