Ashika Ranganathಗೆ ಕನ್ನಡದ ಕ್ಲಾಸ್ ತೆಗೆದುಕೊಂಡಿದ್ಯಾಕೆ ಕನ್ನಡಿಗ ಫ್ಯಾನ್ಸ್?

ಕನ್ನಡದ ಚೆಲುವೆಯರಾದ ನಟಿ ರಶ್ಮಿಕಾ ಮಂದಣ್ಣ, ನಟಿ ಶ್ರೀಲೀಲಾ ಹಾಗೂ ನಟಿ ಆಶಿಕಾ ರಂಗನಾಥ್ ಟಾಲಿವುಡ್ನಲ್ಲಿ ಟಾಪ್ ನಟಿಯರಾಗಿ ಮಿಂಚುತ್ತಿದ್ದಾರೆ

ಕನ್ನಡ ಪ್ರೀತಿ, ಮಾತೃಭಾಷೆ ತಾತ್ಸಾರವನ್ನು ಗಮನಿಸುವ ಫ್ಯಾನ್ಸ್ ಈ ನಟಿ ವಿರುದ್ಧ ಚಾಟಿ ಬೀಸಿದ್ದಾರೆ

ಆಶಿಕಾ ರಂಗನಾಥ್ ದೀಪಾವಳಿ ಹಬ್ಬದಂದು ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಚೆಂದದ ಸೀರೆಯುಟ್ಟ ಫೋಟೋಗಳನ್ನು ಶೇರ್ ಮಾಡಿದ್ದಾರೆ

ಜೊತೆಗೆ ಹಬ್ಬದ ಶುಭಕೋರಿದ್ರು. ದಿವಾಳಿಯ ಶುಭಾಶಯಗಳು ಎಂದು ಪೋಸ್ಟ್ ಮಾಡಿರುವ ಆಶಿಕಾ ವಿರುದ್ಧ ಕನ್ನಡಿಗರು ಸಿಟ್ಟಾಗಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಕಳೆದ ವರ್ಷ ಇದೇ ಆಶಿಕಾ ರಂಗನಾಥ್ ಚೆಂದದ ರೇಷ್ಮೆ ಸೀರೆಯುಟ್ಟು ಟ್ರೆಡಿಷನ್ ಲುಕ್ನಲ್ಲಿ ದೀಪ ಹಚ್ಚುತ್ತಾ ಕನ್ನಡದಲ್ಲಿ ದೀಪಾವಳಿಯ ಶುಭಾಶಯಗಳು ಎಂದು ಬರೆದು ಅಭಿಮಾನಿಗಳಿಗೆ ಶುಭಕೋರಿದ್ರು

ಈ ವರ್ಷ ದಿವಾಳಿ ಎಂದು ಬರೆದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ

ಕನ್ನಡ ಮರೆತು ಹೋದ್ರಾ ಆಶಿಕಾ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ

ಯಾಕೆ ಆಶು, ಕಳೆದ ವರ್ಷ ಕನ್ನಡದಲ್ಲೇ ಬರೆದಿದ್ದೆ ಈಗ ಏನಾಯ್ತು??

ರಶ್ಮಿಕಾ ಮಂದಣ್ಣ ಆಗ್ಬೇಡ, ನಿಮ್ಮಿಂದ ನಾವು ಏನು ಬಯಸಲ್ಲ ಬರಿ ನಾಲ್ಕು ಕನ್ನಡ ಮಾತು ಕನ್ನಡ ಪದ ಅಷ್ಟೇ

ಹೃದಯದಲ್ಲಿ ಇಟ್ಕೊತೀವಿ ಇಲ್ಲ ಅಂದ್ರೆ ಕಿತ್ತಿ ಎಸಿತಿವಿ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!