ಬಾಯ್ ಕಾಟ್ ಫೋನ್ ಪೇ, ಮೊಬೈಲ್ನಿಂದ ಅನ್-ಇನ್ಸ್ಟಾಲ್!
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಫೋನ್ಪೇಯನ್ನು ನಿಷೇಧಿಸುವಂತೆಯೂ ಒತ್ತಾಯಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ತರುವ ಮಸೂದೆಯನ್ನು ಮಂಡಿಸುತ್ತಿದ್ದಾರೆ.
ಇದೇ ವೇಳೆ ಫೋನ್ಪೇ ಸಂಸ್ಥಾಪಕ ಸಮೀರ್ ನಿಗಮ್ ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಪೋನ್ ಪೇ CEO ಹೇಳಿಕೆ ವಿರುದ್ಧ ಕನ್ನಡಪರ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ.
ಫೋನ್ಪೇಯನ್ನು ಸ್ಮಾರ್ಟ್ಫೋನ್ಗಳಿಂದ ಅನ್-ಇನ್ಸ್ಟಾಲ್ ಮಾಡುವಂತೆ ಕರೆ ನೀಡಿವೆ.
ಆ್ಯಪ್ನ್ನು ಬ್ಯಾನ್ ಮಾಡಲು ಕೇಂದ್ರ ಸರ್ಕಾರವು ಜಿಯೋ ಬ್ಲಾಕಿಂಗ್ ವಿಧಾನವನ್ನು ಅನುಸರಿಸುತ್ತದೆ
Phonepe ವಿರುದ್ಧ ಇದೀಗ Boycottphonepay ಅಭಿಯಾನ ಶುರುವಾಗಿದೆ.
ಫೋನ್ ಪೇ ವಿರುದ್ಧ ಹೊರಾಟಕ್ಕೆ ಕನ್ನಡಿಗರು ಹಾಗೂ ಹೋರಾಟಗಾರರು ಮುಂದಾಗಿದ್ದಾರೆ.
ಸಮೀರ್ ನಿಗಮ್ ಇದುವರೆಗೆ ಕರ್ನಾಟಕದ ನಿರ್ಧಾರದ ವಿರುದ್ಧವಾಗಿ ಎರಡು ಟ್ವೀಟ್
ಗಳನ್ನು ಮಾಡಿದ್ದಾರೆ,
ಒಂದು ಟ್ವೀಟ್ ನಲ್ಲಿ, ನನಗೆ 46 ವರ್ಷ. 15ಕ್ಕಿಂತ ಹೆಚ್ಚು ವರ್ಷಗಳ ಕಾಲ ರಾಜ್ಯದಲ್ಲಿ ಎಂದಿಗೂ ವಾಸ ಮಾಡಿಲ್ಲ.
ನಾನು ಕಂಪನಿಗಳನ್ನು ನಿರ್ಮಿಸಿ, ಭಾರತದಾದ್ಯಂತ 25000+ ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ!