ಅಂತೂ-ಇಂತೂ ಬಿಗ್‌ಬಾಸ್‌ ಕಾರು ಕಾರ್ತಿಕ್‌ ಮನೆೆಗೆ ಬಂತು!

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಬಿಗ್ ಬಾಸ್ ವತಿಯಿಂದ ಬ್ರೀಝಾ ಕಾರನ್ನು ನೀಡಿದ್ದಾರೆ.

ಬಿಗ್ ಬಾಸ್ ಮುಗಿದ 7 ತಿಂಗಳ ನಂತರ ಈ ಕಾರನ್ನು ಕಾರ್ತಿಕ್ ಮಹೇಶ್ ಅವರಿಗೆ ನೀಡಿದ್ದಾರೆ.

ಕಾರು ತೆಗೆದುಕೊಳ್ಳುವ ವಿಡಿಯೋವೊಂದನ್ನು ಸ್ವತಃ ಕಾರ್ತಿಕ್ ಅವರೇ ಶೇರ್ ಮಾಡಿಕೊಂಡಿದ್ದಾರೆ.

ಅತಿ ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದ ಸೀಸನ್ ಅಂದ್ರೆ ಬಿಗ್ ಬಾಸ್ 10 ಕನ್ನಡ.

ಕನ್ನಡ ಬಿಗ್ ಬಾಸ್ ನಲ್ಲಿ ಗೆದ್ದವರಿಗೆ ಐಷಾರಾಮಿ ಕಾರು, 50 ಲಕ್ಷ ಹಣ ನೀಡುತ್ತಾರೆ.

ಅದೇ ರೀತಿ ಕಳೆದ ಬಾರಿಯ ಬಿಗ್ ಬಾಸ್ ಸೀಸನ್ 10 ರಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದರು.

ಆದ್ರೆ ಇವರಿಗೆ ಆ ಸಂದರ್ಭದಲ್ಲಿ 50 ಲಕ್ಷ ಹಣ ಮಾತ್ರ ನೀಡಲಾಗಿತ್ತು. ಕಾರನ್ನು ಇನ್ನೂ ನೀಡಿರಲಿಲ್ಲ.

ಕಾರ್ತಿಕ್ ಮಹೇಶ್ ಗೆ ಸಿಕ್ಕಿರುವ ಈ ಕಾರಿನ ಬೆಲೆ 11 ಲಕ್ಷದಿಂದ 14 ಲಕ್ಷದವರೆಗೂ ಇರಬಹುದು.

ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ವಿನ್ ಆದ ನಂತರ ಸಿನಿಮಾ ರಂಗದಲ್ಲಿ ಬೇಡಿಕೆಯ ನಟರಾಗಿದ್ದಾರೆ.