ಶಕ್ತಿ ದೇವತೆಗಳಲ್ಲಿ ಒಬ್ಬಳಾದ ಕಾಟೇರಮ್ಮ ದೇವಿಯ ಪವಾಡಗಳು ಒಂದೆರಡಲ್ಲ,

ಗ್ರಾಮ ದೇವತೆಯಾಗಿ ಆಯಾ ಭಾಗದ ಜನಜೀವನ ಸಂಕುಲದ ಕಷ್ಟಗಳನ್ನ ಪರಿಹರಿಸುತ್ತಾ ಬಂದಿದ್ದಾಳೆ

ಜನರ ಕಲ್ಯಾಣಕ್ಕಾಗಿಯೇ ಕಾಟೇರಮ್ಮ ದೇವಿ ಹಲವೆಡೆ ನೆಲೆಸಿದ್ದಾಳೆ

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ನಾಲ್ಕು ಕಡೆ ಕಾಟೇರಮ್ಮ ದೇವಿಯ ದೇಗುಲಗಳಿದ್ದು, ತಮ್ಮದೇ ಆದ ಭಕ್ತವೃಂದವನ್ನ ದೇವಿ ಹೊಂದಿದ್ದಾಳೆ

ಮುಳಬಾಗಿಲಿನ ಪಟ್ಟಣದ ನಾಲ್ಕು ದಿಕ್ಕಿನಲ್ಲಿಯೂ ಶಕ್ತಿ ದೇವತೆಗಳು ನೆಲೆಸಿದ್ದಾರೆ ಪೂರ್ವಕ್ಕೆ ಕಾಟೇರಮ್ಮ, 

ಪಶ್ಚಿಮಕ್ಕೆ ನಂಚಾರಮ್ಮ, ಉತ್ತರಕ್ಕೆ ಕರಿಮಾರಮ್ಮ, 

ದಕ್ಷಿಣಕ್ಕೆ ವಿರೂಪಾಕ್ಷಿ ಮಾರಮ್ಮ ನೆಲೆಸಿದ್ದಾರೆ

ಕಾಟೇರಮ್ಮ ದೇವಿಗೆ ಕೆಲವೆಡೆ ಬಲಿ ಕೊಟ್ಟು ಪೂಜೆ ಸಲ್ಲಿಸುವ ಆಚರಣೆಯೂ ಇದ್ದು, ಮತ್ತೆ ಕೆಲವೆಡೆ ಸಾತ್ವಿಕವಾಗಿ ಪೂಜೆ ಸಲ್ಲಿಸುವ ವಿಧಾನಗಳಿದೆ

ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದ ಸಹಸ್ರಾರು ಭಕ್ತರು!

ಶಕ್ತಿ ದೇವತೆಯಾದ ಕಾಟೇರಮ್ಮರಿಗೆ ಬೇಸಿಗೆ ಕಾಲದಲ್ಲೆ ಹೆಚ್ಚು ಆಚರಣೆಗಳ ಪೂಜೆಗಳು ನಡೆಯುತ್ತಿದ್ದು,

ಜನರು ತಮ್ಮ ನೋವು ನಲಿವು ದೇವಿಯೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳುತ್ತಿದ್ದಾರೆ

ಕಾಟೇರಮ್ಮ ದೇವಿಯ ಪ್ರತಿಷ್ಟಾಪನೆಗೆ ಮುಖ್ಯ ಕಾರಣವೆಂದರೆ, ಆಯಾ ಭಾಗದ ಜನಜೀವಗಳ ಕಲ್ಯಾಣವೇ ಆಗಿರುತ್ತದೆ

ಹಾಗಾಗಿ ಬಲಿಕೊಟ್ಟು ತಮ್ಮ ಕೋರಿಕೆಯನ್ನ ಸಲ್ಲಿಸಿದ್ದಲ್ಲಿ ಇಷ್ಟಾರ್ಥಗಳು ನೆರವೇರುತ್ತವೇ ಎಂಬುದು ಭಕ್ತರ ನಂಬಿಕೆಯಾಗಿದೆ

Swamy Koragajja: ಮತ್ತೆ ಕಾರಣಿಕ ತೋರಿದ ಸ್ವಾಮಿ ಕೊರಗಜ್ಜ! ಇದಂತೂ ಅಚ್ಚರಿಯೋ ಅಚ್ಚರಿ!