ಬೆಳಕಿನ ಹಬ್ಬದಲ್ಲಿ ಸಾಲು ಸಾಲು ದೀಪಗಳು ಮನೆ-ಮನಗಳನ್ನು ಬೆಳಗುತ್ತದೆ

ಇನ್ನು ದೀಪಾವಳಿ ಹಬ್ಬ ಪಟಾಕಿಗಳಿಲ್ಲದೇ ಪೂರ್ಣವಾದೀತಾ? ಬಗೆ ಬಗೆಯ ಪಟಾಕಿಗಳ ಅಬ್ಬರ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ

ಆದರೆ ದೀಪಾವಳಿ ಸಂಭ್ರಮದ ಮಧ್ಯೆ ಸುರಕ್ಷತೆಯೂ ಅಷ್ಟೇ ಮುಖ್ಯ

 ಅದರಲ್ಲೂ ದೀಪ ಬೆಳಗುವಾಗ, ಪಟಾಕಿಗಳನ್ನು ಸಿಡಿಸುವಾಗ ಆದಷ್ಟೂ ಎಚ್ಚರವಾಗಿರಬೇಕು

Samantha Ruth Prabhu: ಬ್ಲೇಜರ್ ಧರಿಸಿ ಬಟನ್ ಬಿಚ್ಚಿದ ಸಮಂತಾ!

ಅದಕ್ಕಾಗಿ ಕೆಲ ಉಪಯುಕ್ತ ಸುರಕ್ಷತಾ ಸಲಹೆಗಳನ್ನು ನೀಡಲಾಗಿದೆ

ಮನೆಯ ಹೊರಗೆ ಪಟಾಕಿಗಳನ್ನು ಹಚ್ಚಿ: ಮನೆಯಲ್ಲಿ ಯಾವುದೇ ದುರ್ಘಟನೆ ನಡೆಯದಂತೆ ತಡೆಯಲು ಯಾವಾಗಲೂ ಮನೆಯ ಹೊರಾಂಗಣದಲ್ಲಿ ಪಟಾಕಿಗಳನ್ನು ಹೊತ್ತಿಸಿ

 ಒಣ ಎಲೆ, ಹುಲ್ಲನ್ನು ತೆರವುಗೊಳಿಸಿ: ಪಟಾಕಿಗಳನ್ನು ಹಚ್ಚುವ ಮೊದಲು ನಿಮ್ಮ ಮನೆಯ ಸುತ್ತ ಒಣ ಎಲೆಗಳು ಮತ್ತು ಹುಲ್ಲು ತೆರವುಗೊಳಿಸಿ

ಬಳಸಿದ ಪಟಾಕಿಗಳ ವಿಲೇವಾರಿ : ಬಳಸಿದ ಪಟಾಕಿಗಳನ್ನು ಡಸ್ಟ್‌ಬಿನ್‌ನಲ್ಲಿ ವಿಲೇವಾರಿ ಮಾಡುವ ಮೊದಲು 15-20 ನಿಮಿಷಗಳ ಕಾಲ ನೀರಿನಲ್ಲಿ ಹಾಕಿ

ದೆವ್ವದ ಸಿನಿಮಾ ನೋಡಿದ್ರೆ ಮನಸ್ಸಿಗೆ ರಿಲ್ಯಾಕ್ಸ್ ಆಗುತ್ತಾ?

ಹತ್ತಿ ಬಟ್ಟೆ ಧರಿಸಿ : ಸಾಧ್ಯವಾದಷ್ಟೂ ಹತ್ತಿ ಬಟ್ಟೆಗಳನ್ನು ಧರಿಸಿ. ಸಿಂಥೆಟಿಕ್ ಅಥವಾ ನೈಲಾನ್ ಬಟ್ಟೆಗಳನ್ನು ತಪ್ಪಿಸಿ. ಹಾಗೆಯೇ ರಕ್ಷಣಾತ್ಮಕ ಶೂ ಧರಿಸಿ

ಇತರರ ಬಗ್ಗೆ ಯೋಚಿಸಿ : ಆಸ್ಪತ್ರೆಗಳು ಅಥವಾ ಜನನಿಬಿಡ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ತಪ್ಪಿಸಿ

ಪ್ರಥಮ ಚಿಕಿತ್ಸಾ ಕಿಟ್: ಸುಟ್ಟಗಾಯಗಳು ಅಥವಾ ಗಾಯಗಳ ಸಂದರ್ಭದಲ್ಲಿ ತಕ್ಷಣದ ಗಮನಕ್ಕಾಗಿ ಪ್ರಥಮ ಚಿಕಿತ್ಸಾ ಕಿಟ್ ಲಭ್ಯವಿರುವಂತೆ ನೋಡಿಕೊಳ್ಳಿ

ಪಟಾಕಿ ಸಿಡಿಸುವಾಗ ಎಚ್ಚರ : ಪಟಾಕಿ ಸಿಡಿಸಲು ಧೂಪದ್ರವ್ಯ ಅಥವಾ ಸ್ಪಾರ್ಕ್ಲರ್‌ಗಳನ್ನು ಬಳಸಿ. ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ

ಮಾಜಿ ಬಾಯ್​ಫ್ರೆಂಡ್​ಗೆ ಕಾಂಡೊಮ್ ಪ್ಯಾಕೆಟ್ ಗಿಫ್ಟ್ ಕೊಟ್ರಾ ದೀಪಿಕಾ ಪಡುಕೋಣೆ?