ಯಲವಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ಅಡುಗೆ ಮನೆಯಲ್ಲಿ ಬುಸುಗುಟ್ಟಿದ ಕಾಳಿಂಗ
ಕುಮಟಾದ ಯಲವಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ 10 ಅಡಿ ಉದ್ದದ ಕಾಳಿಂಗ ಹಾವೊಂದನ್ನು ರಕ್ಷಿಸಲಾಗಿದೆ.
ಕೊನೆಗೂ ಕಾಳಿಂಗವನ್ನ ಸ್ನೇಕ್ ಪವನ್ ಅವರು ರಕ್ಷಿಸಿದ್ದಾರೆ.
ಗಣೇಶ್ ಭಟ್ಟ ಮನೆಯ ಅಡುಗೆ ಕೋಣೆಯಲ್ಲಿ ಮಿಕ್ಸರ್ ಮೇಲೆ ಸುರುಳಿ ಸುತ್ತಿ ಮಲಗಿರುವುದು ಕಂಡು ಬಂದಿದೆ.
ಚಹಾ ಮಾಡಲೆಂದು ಅಡುಗೆ ಕೋಣೆ ಬಂದಾಗ ಕಾಳಿಂಗ ಹೆಡೆ ಎತ್ತಿ ಬುಸುಗುಡಲು ಶುರು ಮಾಡಿದೆ.
ಹಾವನ್ನು ಓಡಿಸುವ ಪ್ರಯತ್ನ ಕೈ ಬಿಟ್ಟು ಸ್ನೇಕ್ ಪವನ್ ಅವರಿಗೆ ಮಾಹಿತಿ ನೀಡಿದ್ದಾರೆ.
ಉರಗ ರಕ್ಷಕ ಸ್ನೇಕ್ ಪವನ್ 10 ಅಡಿ ಉದ್ದದ ಕಾಳಿಂಗನನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಸಂಪೂರ್ಣ ಕಾರ್ಯಾಚರಣೆಯನ್ನು ಹೆಸರಾಂತ ಗೋಪಿ ಜೊಲಿ ಜಾಲಿಯವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಸ್ನೇಕ್ ಪವನ್ ಉತ್ತರ ಕನ್ನಡ ಭಾಗದಲ್ಲಿ ಒಂದೇ ವಾರದಲ್ಲಿ ರಕ್ಷಿಸಿದ 3ನೇ ಕಾಳಿಂಗ ಸರ್ಪ ಆಗಿದೆ.
ಯಲವಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ಅಡುಗೆ ಮನೆಯಲ್ಲಿ ಬುಸುಗುಟ್ಟಿದ ಕಾಳಿಂಗ