ಅಡುಗೆಯಲ್ಲಿ ಉಪ್ಪು ಜಾಸ್ತಿ ಆಗಿದೆ ಅಂತ ಯೋಚನೆ ಮಾಡ್ತಾ ಇದ್ದೀರಾ? ಯೋಚನೆ ಮಾಡಬೇಡಿ

ಈ ಟಿಪ್ಸ್ ಫಾಲೋ ಮಾಡಿದ್ರೆ ರುಚಿಯಾಗುತ್ತೆ ಅಡುಗೆ!

ಅಡುಗೆ ಮಾಡುವಾಗ ಉಪ್ಪು ಬೇಕೇ ಬೇಕು. ಉಪ್ಪು ನೋಡಲು ಸಣ್ಣಗಿರಬಹುದು. ಆದರೆ ಇದು ಇಲ್ಲ ಅಂದ್ರೆ ಅಡಿಗೆಗೆ ರುಚಿಯೇ ಇರೋದಿಲ್ಲ

ಆದರೆ ಅಡುಗೆಗೆ ಹಾಕಿರುವ ಉಪ್ಪು ಹೆಚ್ಚಾದ್ರೆ ನೀವು ಏನು ಮಾಡ್ತಾ ಇದ್ರಿ?

ಸಾಂಬಾರಿನಲ್ಲಿ ಉಪ್ಪು ಹೆಚ್ಚಾದರೆ ಅದಕ್ಕೆ ಸ್ವಲ್ಪ ನೀರನ್ನು ಹಾಕಿ

ಬೇರೆ ಪದಾರ್ಥಗಳನ್ನು ಸೇರಿಸಬೇಕು ಎಂದರೆ ಅದು ಉಪ್ಪು ಇಲ್ಲದಾಗಿರಬೇಕು. ನೀವು ನೀರು ಹಾಕಿದ್ರೆ ನೀವು ಮಾಡಿದ ಪದಾರ್ಥ ಸ್ವಲ್ಪ ತೆಳ್ಳಗಾಗಬಹುದು

ಸ್ವಲ್ಪ ಜೋಳದ ಹಿಟ್ಟು, ಕಡಲೆ ಹಿಟ್ಟು ತೆಗೆದುಕೊಂಡು ನೀರಲ್ಲಿ ಮಿಕ್ಸ್‌ ಮಾಡಿ ಸಾಂಬಾರಿಗೆ ಸೇರಿಸಿದರೆ ಸರಿಯಾಗುತ್ತದೆ

ಕ್ರೀಮ್‌ ನಂತಹ ಉತ್ಪನ್ನಗಳು ಪದಾರ್ಥದಲ್ಲಿರುವ ಉಪ್ಪಿನ ಅಂಶವನ್ನು ಕಡಿಮೆಗೊಳಿಸುತ್ತದೆ

ಬೇಕಾದಲ್ಲಿ ನೀವು ಬೆಲ್ಲವನ್ನು ಹಾಕಬಹುದು ಅಥವಾ ಸಕ್ಕರೆಯನ್ನು ಕೂಡ ಹಾಕಬಹುದು. ಉಪ್ಪಿನ ಅಂಶವನ್ನು ಈ ಬೆಲ್ಲವು ಹೀರಿಕೊಳ್ಳುತ್ತದೆ

ಉಪ್ಪು ಜಾಸ್ತಿ ಆಯ್ತು ಅಂದ್ರೆ ಕೊಂಚ ನೀರನ್ನಾದ್ರೂ ಹಾಕಿ, ಇಲ್ಲದಿದ್ದಲ್ಲಿ ಆಲೂಗೆಡ್ಡೆಯನ್ನು ಹಾಕಬಹುದು. ಇದು ಸಪ್ಪೆ ಇರೋದ್ರಿಂದ ಹೆಚ್ಚಾದ ಉಪ್ಪನ್ನು ಹೀರಿಕೊಳ್ಳುತ್ತದೆ