ನರಸಿಂಹ ಜಯಂತಿಯ ಮಹತ್ವ ಇವೆಲ್ಲವನ್ನು ಚಿಕ್ಕಮಗಳೂರಿನ ಜ್ಯೋತಿಷಿಗಳಾದ ಅಶ್ವತ್ಥ ನಾರಾಯಣ ಜೋಶಿಗಳು ವಿವರವಾಗಿ ತಿಳಿಸಿದ್ದಾರೆ ನೋಡಿ.
ಹಿಂದೂ ಸಂಸ್ಕೃತಿಯಲ್ಲಿ ಭಗವಂತ ಶ್ರೀ ವಿಷ್ಣುವಿಗೆ ವಿಶಿಷ್ಟ ಸ್ಥಾನವಿದೆ,
ಭಗವಂತ ವಿಷ್ಣು ಹೊರೆತು ಬೇರೆ ನಾಮವಿಲ್ಲ, ಹರಿಯ ನಾಮಸ್ಮರಣೆ ಮಾಡಿದ್ರೆ ಎಲ್ಲ ಸಂಕಟಗಳು ದೂರ ಆಗುತ್ತೆ ಎಂಬುದು ಜನರ ನಂಬಿಕೆ.
ನರಸಿಂಹ ಹೆಸರೇ ಸೂಚಿಸುವಂತೆ ಅರ್ಧ ಮನುಷ್ಯ ಅರ್ಧ ಸಿಂಹನ ಅವತಾರದಲ್ಲಿ ಬಂದ ವಿಷ್ಣುವಿನ 4 ನೇ ಅವತಾರವೇ ನರಸಿಂಹ.
ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಗೆ ಬಂದ ಹರಿಯ ಅವತಾರವೇ ನರಸಿಂಹ,
ಈ ಬಾರಿ ಮೇ 22 ರ ಬುಧವಾರ ನರಸಿಂಹನ ಜಯಂತಿ ಬಂದಿದ್ದು ಚತುರ್ದಶಿ ಸಂಜೆ 4ರಿಂದ 7 ರವರೆಗೆ ಶ್ರೀ ನರಸಿಂಹನ ಪೂಜೆ ಮಾಡಲು ಒಳ್ಳೆಯ ಅವಕಾಶವಾಗಿದೆ.
ನರಸಿಂಹ ಜಯಂತಿಯು ಭಗವಾನ್ ವಿಷ್ಣುವಿನ ಅರ್ಧ ಪುರುಷ, ಅರ್ಧ ಸಿಂಹ ಅವತಾರವಾದ ಭಗವಾನ್ ನರಸಿಂಹನ ಜನ್ಮದಿನವನ್ನು ಸೂಚಿಸುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುರ್ದಶಿಯ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ.
ನರಸಿಂಹ ದೇವರ ಆಶೀರ್ವಾದವನ್ನು ಪಡೆಯಲು ಭಕ್ತರು ಈ ದಿನವನ್ನು ಉಪವಾಸ, ಪ್ರಾರ್ಥನೆ ಮತ್ತು ಭಕ್ತಿ ಚಟುವಟಿಕೆಗಳೊಂದಿಗೆ ಆಚರಿಸುತ್ತಾರೆ.
Siddaganga Mutt: ಸಿದ್ದಗಂಗಾ ಮಠದಲ್ಲಿ ಓದಲು ಇಲ್ಲಿದೆ ಅವಕಾಶ, ಹೀಗೆ ಅರ್ಜಿ ಹಾಕಿ