ಕೊಡಗಿನ ಪ್ರವಾಸಿಗರು ಈ ತಾಣಕ್ಕೆ ತಪ್ಪದೇ ಭೇಟಿ ನೀಡಿ ಎಂಜಾಯ್ ಮಾಡಬಹುದಾಗಿದೆ.

ಪ್ರವಾಸಿಗರ ಸ್ವರ್ಗ ಎಂದು ಕರೆಯುವ ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಪ್ರವಾಸಿ ತಾಣ ಆರಂಭವಾಗಿದೆ.

ತಿತಿಮತಿ ಸಮೀಪದ ಆನೆ ಚೌಕುರು ವ್ಯಾಪ್ತಿಯಲ್ಲಿನ ಮತ್ತಿಗೋಡು ಆನೆ ಶಿಬಿರ ಇದೀಗ ಪ್ರವಾಸಿಗರಿಗೆ ಮುಕ್ತವಾಗಿದೆ.

ಆನೆಗಳನ್ನು ಸಾಕಲು ಮತ್ತು ಪಳಗಿಸಲು ಮಾತ್ರ ಸೀಮಿತವಾಗಿದ್ದ ಮತ್ತಿಗೋಡು ಈಗ ಪ್ರವಾಸಿ ತಾಣವಾಗಿ ಬದಲಾಗಿದೆ.

ಈ ಮುನ್ನ ಕೊಡಗಿನಲ್ಲಿ ಸಾಕಾನೆಗಳನ್ನು ನೋಡಲು ದುಬಾರೆ ಸಾಕಾನೆ ಶಿಬಿರಕ್ಕೆ ತೆರಳಬೇಕಿತ್ತು.

ಆನೆ ಶಿಬಿರವನ್ನು 1 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಪ್ರವಾಸಿಗರು ಆನೆಗಳನ್ನು ನೋಡಲು ಆಗಮಿಸುತ್ತಿದ್ದಾರೆ.

ಈ ಶಿಬಿರದಲ್ಲಿ ಆನೆಗಳಿಗೆ ಆಶ್ರಯ ಮತ್ತು ಆಹಾರ ತಾಣಗಳನ್ನು ಸ್ಥಾಪಿಸಲಾಗಿದೆ.

ಶಿಬಿರಕ್ಕೆ ಸಮೀಪಿಸುವ ರಸ್ತೆ, ಪಾರ್ಕಿಂಗ್ ಸೌಲಭ್ಯ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಪ್ರವಾಸಿಗರು ಮತ್ತಿಗೋಡು ಶಿಬಿರದಲ್ಲಿ ಸಾಕಾನೆಗಳನ್ನು ಹತ್ತಿರದಿಂದ ನೋಡಿ ಪೋಟೋ ತೆಗೆಸಿಕೊಂಡು ಖುಷಿಪಡಬಹುದಾಗಿದೆ.

ಕೊಡಗಿನಲ್ಲಿ ಹೊಸ ಪ್ರವಾಸಿ ತಾಣ!