ಹೋಟೆಲ್, ಶಾಪಿಂಗ್ ಮಾಲ್ ಅಥವಾ ಬಟ್ಟೆ ಅಂಗಡಿಯಲ್ಲಿ ಟ್ರಯಲ್ ರೂಂ ಒಳಗೆ ಹೋದಾಗ ಅಲ್ಲಿ ಹಿಡನ್ ಕ್ಯಾಮೆರಾ ಇದ್ಯಾ ಎಂದು ಕಂಡುಹಿಡಿಯುವುದು ಬಹಳ ಕಷ್ಟಕರವಾದ ಕೆಲಸ

ಈ ಎಲ್ಲಾ ಸ್ಥಳಗಳಲ್ಲಿ ಹಿಡನ್ ಕ್ಯಾಮೆರಾಗಳಿವೆ ಎಂದು ನಾವು ತೀರ್ಮಾನಿಸಲು ಸಾಧ್ಯವಾಗುವುದಿಲ್ಲ

ಇಂತಹ ವೇಳೆ ನಾವು ಹೇಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ಒಂದು ವೇಳೆ ನಾವು ಅಲರ್ಟ್ ಆಗದಿದ್ದರೆ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗಬಹುದು

ಸಾಮಾನ್ಯವಾಗಿ ಈ ಹಿಡನ್ ಕ್ಯಾಮೆರಾಗಳನ್ನು ನಿಮಗೆ ಗೊತ್ತಿಲ್ಲದಂತೆ ಇಟ್ಟಿರಬಹುದು

ಎಣ್ಣೆಯುಕ್ತ ಆಹಾರವನ್ನು ತಿಂದ ನಂತರ ಮರೆಯದೇ ಈ ಕೆಲಸವನ್ನು ನೀವು ಮಾಡಿ

ಮೊದಲು ಟ್ರಯಲ್ ರೂಮ್ ಅನ್ನು ಪ್ರವೇಶಿಸಿ ಮತ್ತು ತಕ್ಷಣವೇ ಸುತ್ತಲೂ ಸರಿಯಾಗಿ ನೋಡಿ

ಏನಾದರೂ ಅನುಮಾನಾಸ್ಪದವಾಗಿ ಕಂಡು ಬಂದರೆ ಕೂಡಲೇ ಪರಿಶೀಲಿಸಿ. ಪ್ರಸ್ತುತ ಕಾಂಪ್ಯಾಕ್ಟ್ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ

ಯಾವುದೇ ಸಂದೇಹವಿದ್ದಲ್ಲಿ ಅಲ್ಲಿನ ಪೊಲೀಸ್ ಅಥವಾ ಸಿಬ್ಬಂದಿಗೆ ಮಾಹಿತಿ ನೀಡಿ, ಕೂಡಲೇ ಅಲ್ಲಿಂದ ಹೊರಡಿ

ಟ್ರಯಲ್ ರೂಮ್ಗಳಲ್ಲಿರುವ ಹ್ಯಾಂಗರ್ಗಳನ್ನು ಪರಿಶೀಲಿಸಿ. ಅಲ್ಲಿನ ಗೋಡೆಗಳ ಮೇಲೆ ಒಂದು ಕಣ್ಣಿಡಿ

Bengaluru: ಪೊಲೀಸರಿಗೆ ಕರೆ ಮಾಡಿ ತಗ್ಲಾಕೊಂಡ ವಂಚಕ; ಯುವಕ-ಯುವತಿಯರೇ ಇವನ ಟಾರ್ಗೆಟ್!

ಕೆಲವೊಮ್ಮೆ ಸಣ್ಣ ಕ್ಯಾಮೆರಾಗಳು ಹ್ಯಾಂಗರ್ ಹಿಂದೆ ಮರೆಮಾಡಬಹುದು. ಮರದ ವಾಲ್ಗಳಲ್ಲಿನ ಅಂತರಗಳಲ್ಲಿಯೂ ಗುಪ್ತ ಕ್ಯಾಮೆರಾಗಳಿರುವುದನ್ನು ನೀವು ಕಾಣಬಹುದು

ಕನ್ನಡಿಯಲ್ಲಿ ಗಮನಿಸಿ. ಎದುರುಗಡೆ ಇನ್ನೊಂದು ಕೋಣೆ ಅಥವಾ ಗೋಡೆ ಕಂಡರೆ ಏನೋ ತಪ್ಪಾಗಿದೆ ಎಂದು ಅನಿಸಬಹುದು

 ಕನ್ನಡಿಯ ಹಿಂದೆ ಇನ್ನೊಂದು ಕೋಣೆ ಇದ್ದರೆ, ಎಚ್ಚರಿಕೆಯಿಂದಿರಿ. ಅನೇಕ ಬಾರಿ ಕ್ಯಾಮೆರಾಗಳು ಇರಬಹುದು

ಕನ್ನಡಿ ಸರಿಯಾಗಿದೆಯೇ ಎಂದು ಪರೀಕ್ಷಿಸಿ. ಬಾಗಿಲು ತಟ್ಟುವಂತೆ ಕನ್ನಡಿಯ ಮೇಲೆ ತಟ್ಟಿ. ಕನ್ನಡಿಯಿಂದ ಟೊಳ್ಳಾದ ಶಬ್ದ ಬಂದರೆ ಎಚ್ಚರಿಕೆಯಿಂದ ಇರುವುದು ಅಗತ್ಯ

ನಂತರ ಕನ್ನಡಿಯನ್ನು ಸ್ಪರ್ಶಿಸಿ. ಬೆರಳಿಗೂ ಪ್ರತಿಫಲನಕ್ಕೂ ಅಂತರವಿದ್ದರೆ ಕ್ಯಾಮೆರಾ ಇರುವುದು ಗೊತ್ತಾಗುತ್ತದೆ. ಆಗ ಎಚ್ಚರದಿಂದ ಇರಿ

ಇಲ್ಲದಿದ್ದರೆ ನೀವು ಬಟ್ಟೆ ಬದಲಾಯಿಸುವ ಮುನ್ನ, ಟ್ರಯಲ್ ರೂಮ್ನಲ್ಲಿನ ದೀಪಗಳನ್ನು ಆಫ್ ಮಾಡಿ.  ಬಟ್ಟೆ ಬದಲಾಯಿಸಿದ ನಂತರ ಲೈಟ್ ಆನ್ ಮಾಡಿ, ಬಟ್ಟೆ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಲೈಟ್ ಆಫ್ ಆಗಿದ್ದರೆ, ಕ್ಯಾಮೆರಾ ಇದ್ದರೂ ಪ್ರಯೋಜನವಿಲ್ಲ

Bigg Boss: ಕನ್ನಡ ಓದಿದ ಮೈಕಲ್​; ಮನೆಮಂದಿಗೆ​ ಆಶ್ಚರ್ಯ!