ಲಕ್ಷದ್ವೀಪದ ಪ್ರವಾಸಕ್ಕೆ ನಿಮಗೆ ಕನಿಷ್ಠ ಎಂದರೂ ಎರಡರಿಂದ ಮೂರು ದಿನಗಳಂತೂ ಬೇಕೇ ಬೇಕು.
ಐದು ದಿನಗಳ ಪ್ರವಾಸ ಮಾಡಿದ್ರೆ ಲಕ್ಷದ್ವೀಪವನ್ನು ಆರಾಮಾಗಿ ಸುತ್ತಾಡಬಹುದು.
ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ತೆರಳಿ ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಾಲ್ಡೀವ್ಸ್ ಸರ್ಕಾರದ ಸಚಿವರು ಎಗರಾಡಿ ದ್ವೇಷಭರಿತ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಲಕ್ಷದ್ವೀಪದಲ್ಲಿ ನೋಡಲೇಬೇಕಾದ ತಾಣಗಳು ಯಾವುವು ಎಂಬ ಹುಡುಕಾಟ ಹೆಚ್ಚಾಗುತ್ತಿದೆ.
ಕನ್ನಡಿಗರು ಸಹ ಸುಲಭವಾಗಿ ಲಕ್ಷದ್ವೀಪಕ್ಕೆ ತೆರಳಿ ಅಲ್ಲಿನ ಸೌಂದರ್ಯ ಸವಿಯಬಹುದಾಗಿದೆ.
ಬೆಂಗಳೂರಿನಿಂದ ಅಗತ್ತಿ ಏರೋಡ್ರೋಮ್ ವಿಮಾನ ನಿಲ್ದಾಣಕ್ಕೆ ತೆರಳಿ ಈ ದ್ವೀಪವನ್ನು ನೀವು ತಲುಪಬಹುದಾಗಿದೆ.
ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ಹಲವು ಪ್ರಮುಖ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆ ಒದಗಿಸುತ್ತವೆ.
18ರಿಂದ20 ಸಾವಿರದ ಆಸುಪಾಸಿನಲ್ಲಿ ವಿಮಾನ ಟಿಕೆಟ್ ಬೆಲೆ ಆರಂಭವಾಗುತ್ತದೆ.
ಒಟ್ಟಾರೆ ನೀವು ಸಹ ಬೆಂಗಳೂರಿನಿಂದ ವಿಮಾನದ ಮೂಲಕ ನೀವು ಲಕ್ಷದ್ವೀಪಕ್ಕೆ ಪ್ರವಾಸ ಹೋಗಿ ಬರಬಹುದಾಗಿದೆ.