ಚೌತಿಯಂದು ನಿಮ್ಮ ದಿನಚರಿ ಹೀಗಿರಲಿ!

ಗಣೇಶ ಹಬ್ಬದ ದಿನದಂದು ನಮ್ಮ ದಿನಚರಿ ಸ್ವಲ್ಪ ವಿಭಿನ್ನವಾಗಿರಬೇಕು

ಯಾಕಂದ್ರೆ ಆ ದಿನದಂದು ಭಗವನ್‌ ಗಣಪತಿಯು ತನ್ನ ಭಕ್ತರಿಗಾಗಿ ಭೂಮಿಗೆ ಬಂದು ಯೋಗಕ್ಷೇಮವನ್ನು ನೋಡುತ್ತಾರೆ ಎನ್ನುವ ನಂಬಿಕೆಯಿದೆ

ಹೀಗಿರುವಾಗ ಗಣಪತಿಯೂ ನಿಮ್ಮ ಜಾಗಕ್ಕೆ ಬರಬೇಕಾದ್ರೆ, ನೀವು ಈ ಪಾಲನೆಗಳನ್ನು ಪಾಲಿಸಬೇಕು

ಮೊದಲಿಗೆ ಬೆಳಿಗ್ಗೆ ಬೇಗ ಎದ್ದು ಪವಿತ್ರ ಸ್ನಾನ ಮಾಡಬೇಕು

ನಂತರ ಮನೆ ಮತ್ತು ವಿಶೇಷವಾಗಿ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಬೇಕು

ಬಳಿಕ ನಿಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಇರಿಸಿ ಮತ್ತು ದೇಸಿ ಹಸುವಿನ ತುಪ್ಪದಿಂದ ದೀಪವನ್ನು ಬೆಳಗಿಸಬೇಕು

ನಂತರ ಹಳದಿ ಬಣ್ಣದ ಹೂವುಗಳು, ದೂರ್ವಾ ಹುಲ್ಲು ಮತ್ತು ಬೂಂದಿ ಲಡ್ಡನ್ನು ನೈವೇಧ್ಯವಾಗಿ ನೀಡಿ

ಸಂಕಷ್ಟಿ ಕಥಾ ಪಠಿಸುತ್ತಾ ಗಣಪನ ಜ್ಞಾನ ಮಾಡಬೇಕು

ಸಂಜೆ ಕೂಡ ಗಣೇಶನಿಗೆ ಹೀಗೆ ಪೂಜೆಯನ್ನು ಮಾಡಬೇಕು

ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ ಈ ಸಂದರ್ಭದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ ಮತ್ತು ಮಾಂಸದಂತಹ ಯಾವುದೇ ಆಹಾರವನ್ನು ಸೇವಿಸಬೇಡಿ

ಮಲಗುವ ಮುಂಚೆ ಈ ಮಂತ್ರವನ್ನು ಪಠಿಸಿ

ಓಂ ಗಣ ಗಣಪತಯೇ ನಮಃ..!! ಓಂ ವಕ್ರ ತುಂಡ ಮಹಾಕಾಯೇ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮಯೇ ದೇವ್ ಸರ್ವ ಕಾರ್ಯೇಷು ಸರ್ವದಾ..!!

ಹೀಗೆ ಮಾಡಿದ್ರೆ ಖಂಡಿತ ಗಣಪ ನಿಮ್ಮನ್ನು ಭೇಟಿಯಾಗಿ, ನಿಮ್ಮನ್ನು ಆರ್ಶೀವಾದಿಸುತ್ತಾರೆ ಎಂಬ ನಂಬಿಕೆಯಿದೆ 

ಭೋಜನ ಪ್ರಿಯ ಗಣೇಶನಿಗೆ ತಪ್ಪದೇ ಈ ನೈವೇದ್ಯ ಮಾಡಿ, ಒಳ್ಳೆಯ ಫಲ ಸಿಗುತ್ತೆ