ಪುರುಷರಿಗಿಂತ ಮಹಿಳೆಯರು ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಮಟ್ಟ ಯಾವಾಗಲೂ ಕಡಿಮೆ ಇರುತ್ತದೆ. ಮಹಿಳೆಯರಲ್ಲಿ ದೈಹಿಕ ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಬ್ಬಿಣಾಂಶವು ಅತ್ಯಂತ ಅವಶ್ಯಕ
ನೀವು ದಣಿದಿದ್ದರೆ, ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ನೀವು ಎಷ್ಟೇ ಪ್ರಯತ್ನಿಸಿದರೂ ದೇಹವು ಸಹಕರಿಸುವುದಿಲ್ಲ. ಇದಕ್ಕೆ ದೇಹದಲ್ಲಿ ಕಬ್ಬಿಣಾಂಶದ ಕೊರತೆಯೇ ಮುಖ್ಯ ಕಾರಣವಾಗಿದೆ
ತೆಳು ತ್ವಚೆ: ನಿಮ್ಮ ತ್ವಚೆಯು ತೆಳು ಅಥವಾ ಹಳದಿ ಬಣ್ಣದಲ್ಲಿದ್ದರೂ ಕಬ್ಬಿಣದ ಕೊರತೆಯೇ ಇದಕ್ಕೆ ಕಾರಣ. ಬಾಯಿಯ ಒಳಭಾಗವು ರಕ್ತ ಸಂಚಾರವಿಲ್ಲದೇ ಬಿಳಿಯಾಗಿದ್ದರೆ, ತುಟಿಗಳು ಮತ್ತು ಬೆರಳಿನ ಉಗುರುಗಳು ಬಿಳಿಯಾಗಿದ್ದರೆ, ಅದು ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ
ಕಾಲುಗಳ ಮರಗಟ್ಟುವಿಕೆ: ನೀವು ಒಂದೇ ಸ್ಥಳದಲ್ಲಿ ಕುಳಿತುಕೊಂಡರೆ, ತಕ್ಷಣವೇ ಕಾಲುಗಳು ನಿಶ್ಚೇಷ್ಟಿತವಾಗುತ್ತವೆ. ನಿಮ್ಮ ಕಾಲುಗಳು ಆಘಾತಕ್ಕೊಳಗಾದಂತೆ ನಿಮಗೆ ಅನಿಸುತ್ತದೆ