ಆಗುಂಬೆ ವ್ಯಾಪ್ತಿಯ ಹೆಬ್ರಿಯಲ್ಲಿ ದೈತ್ಯಾಕಾರದ ಕಾಳಿಂಗ ಸರ್ಪವೊಂದನ್ನ ಉರಗ ತಜ್ಞರ ತಂಡ ರಕ್ಷಿಸಿದೆ
ಇಂತಹದ್ದೊಂದು ದೈತ್ಯ ಕಾಳಿಂಗವನ್ನು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೀತಾನದಿ ಸಮೀಪದ ನಡಪಾಲ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ
ಖ್ಯಾತ ಉರಗ ರಕ್ಷಕ ಹಾಗೂ ವಿಶೇಷವಾಗಿ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸುವ ಡಾ. ಪಿ.ಗೌರಿಶಂಕರ್ ಅವರ ನೇತೃತ್ವದ ತಂಡವು ಈ ಕಾಳಿಂಗವನ್ನು ನಡಪಾಲ್‌ನ ಭಾಸ್ಕರ ಶೆಟ್ಟಿಯವರ ಮನೆ ಸಮೀಪ ಸೆರೆ ಹಿಡಿಯಿತು
ಡಾ.ಪಿ.ಗೌರಿ ಶಂಕರ್ ಅವರು ಅವರ ಸಹವರ್ತಿ ಪ್ರಶಾಂತ್ ಅವರೊಂದಿಗೆ ಸೇರಿಕೊಂಡು 2004 ರಿಂದ ಆಗುಂಬೆ ಪ್ರದೇಶದಲ್ಲಿ ಕಾಳಿಂಗಗಳನ್ನು ರಕ್ಷಿಸುತ್ತಿದ್ದಾರೆ.
Wax Statue: ಕ್ಯಾನ್ಸರ್‌ನಿಂದ ಮಗಳು ಸಾವು, ಅವಳ ನೆನಪಿಗಾಗಿ ಮೇಣದ ಪ್ರತಿಮೆ ಮಾಡಿಸಿದ ಅಮ್ಮ!
ಆದರೆ, ಇದೇ ಮೊದಲ ಬಾರಿಗೆ ದೈತ್ಯ ಕಾಳಿಂಗ ಸೆರೆ ಹಿಡಿದಿದ್ದು ಖುದ್ದು ಅವರೇ ಅದರ ತೂಕ ಹಾಗೂ ಉದ್ದ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ
ಸಾಮಾನ್ಯವಾಗಿ ಕಾಳಿಂಗಗಳ ಸರಾಸರಿ ತೂಕವು ಹೆಣ್ಣಾದರೆ 2 ರಿಂದ 3.5 ಹಾಗೂ ಗಂಡು ಕಾಳಿಂಗ 3.5 ರಿಂದ 6 ಕೆಜಿಯಷ್ಟಿರುತ್ತದೆ
ಆದರೆ, ಈ ಗಂಡು ಕಾಳಿಂಗವು 12.5 ಕೆಜಿ ತೂಕವನ್ನು ಹೊಂದಿದ್ದು, ಸುಮಾರು 15 ಅಡಿ ಉದ್ದವಿತ್ತು
ಗೌರಿಶಂಕರ್ ಅವರ ಪ್ರಕಾರ, ಇದು ಭಾರತದಲ್ಲೇ ಅತ್ಯಂತ ದೊಡ್ಡ ಕಾಳಿಂಗ ಅನ್ನೋದು ಅವರ ಅಭಿಪ್ರಾಯವಾಗಿದೆ
Saffron Crop: ರಾಜ್ಯದಲ್ಲಿ ಪ್ರಥಮ ಬಾರಿಗೆ ಕೇಸರಿ ಬೆಳೆದು ಸೈ ಎನಿಸಿಕೊಂಡ ಯುವಕ!
ಕಾಳಿಂಗ ಫೌಂಡೇಶನ್‌ನಡಿ ಕಾರ್ಯಾಚರಿಸುತ್ತಿರುವ ಡಾ. ಗೌರಿಶಂಕರ್ ಅವರ ತಂಡವು ಇಂತಹ ಹಲವಾರು ಕಾಳಿಂಗ ಕಾರ್ಯಾಚರಣೆಯಲ್ಲಿ ಹೆಸರು ಮಾಡಿದೆ.
ನಡಪಾಲ್‌ನಲ್ಲಿ ಹಿಡಿದ ಕಾಳಿಂಗವನ್ನು ಸುರಕ್ಷಿತವಾಗಿ ಸೀತಾನದಿ ಸಮೀಪದ ಅರಣ್ಯಕ್ಕೆ ಮರಳಿ ಬಿಡಲಾಗಿದೆ