ಸಾಮಾನ್ಯವಾಗಿ ನಾವೆಲ್ಲಾ ನಮ್ಮ ರಾಷ್ಟ್ರೀಯ ಪಕ್ಷಿ ನವಿಲನ್ನು ತುಂಬಾನೇ ಇಷ್ಟಪಡುತ್ತೇವೆ, ಇದಕ್ಕೆ ಕಾರಣ ಅದರ ಬಣ್ಣ ಬಣ್ಣದ ರೆಕ್ಕೆಗಳು ಮತ್ತು ಅದರ ಒಂದು ಗತ್ತು, ಗಮ್ಮತ್ತು ಹಾಗೂ ಸೌಂದರ್ಯ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ.
ನವಿಲಿನ ಪೂರ್ಣ ಸೌಂದರ್ಯವನ್ನು ನೀವು ಕಣ್ತುಂಬಿಕೊಳ್ಳಬೇಕೆಂದರೆ ನವಿಲುಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನಗಳಲ್ಲಿ ನೋಡುವುದು ಆಗಿರುತ್ತದೆ ಅಂತ ಹೇಳಬಹುದು.
ಪಟ್ಟಣದ ಆಚೆ ಇರುವ ಅರಣ್ಯ ಪ್ರದೇಶಗಳಲ್ಲಿ ಮತ್ತು ಹೊಲ ಗದ್ದೆಗಳಲ್ಲಿ ವಾಸಿಸುವ ನವಿಲುಗಳು ಅವುಗಳ ನೈಸರ್ಗಿಕ ಆವಾಸ ಸ್ಥಾನಗಳಲ್ಲಿರುವಷ್ಟು ಸುಂದರವಾಗಿ ಮತ್ತು ಗತ್ತು, ಗಮ್ಮತ್ತಿನಿಂದ ಇರುವುದಿಲ್ಲ.
ನೈಸರ್ಗಿಕ ಆವಾಸಸ್ಥಾನಗಳಲ್ಲಿರುವ ನವಿಲುಗಳು ಸದಾ ಕಾಲ ಗುಂಪು ಗುಂಪಾಗಿ ಹಸಿರು ದಟ್ಟವಾದ ಗಿಡ ಮರಗಳ ನಡುವೆ ಓಡಾಡುತ್ತಿರುತ್ತವೆ ಮತ್ತು ಗಂಡು ನವಿಲು ತನ್ನ ನೀಲಿ ಮತ್ತು ಹಸಿರು ಮಿಶ್ರಿತ ರೆಕ್ಕೆಗಳನ್ನು ಪೂರ್ತಿಯಾಗಿ ಬಿಚ್ಚಿಕೊಂಡು
ಸ್ವಲ್ಪ ಮಳೆ ಹನಿ ಮೈಮೇಲೆ ಬಿದ್ದರೆ ಸಾಕು, ನವಿಲುಗಳು ತಮ್ಮ ಗರಿಗಳನ್ನು ಪೂರ್ತಿಯಾಗಿ ತೆರೆದುಕೊಂಡು ನೃತ್ಯ ಸಹ ಮಾಡುತ್ತವೆ. ಆಹಾ.. ಆ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು.
ರಣಥಂಬೋರ್ ಅನೇಕ ನವಿಲುಗಳಿಗೆ ನೆಲೆಯಾಗಿದೆ, ಇವು ಉದ್ಯಾನವನದೊಳಗಿನ ಜಲಮೂಲಗಳು ಅಥವಾ ಅವಶೇಷಗಳ ಬಳಿ ಸದಾ ಕಾಲ ಓಡಾಡುತ್ತಾ ಮತ್ತು ಆಗಾಗ್ಗೆ ನೃತ್ಯ ಮಾಡುವುದನ್ನು ಸಹ ಇಲ್ಲಿ ಹೆಚ್ಚಾಗಿ ಕಾಣಬಹುದು.
ಸರಿಸ್ಕಾ ಹುಲಿ ಅಭಯಾರಣ್ಯವು ಸಹ ರಾಜಸ್ಥಾನದಲ್ಲಿರುವ ಮತ್ತೊಂದು ನವಿಲುಗಳ ನೈಸರ್ಗಿಕ ಆವಾಸಸ್ಥಾನವಾಗಿದೆ ಅಂತ ಹೇಳಬಹುದು. ಈ ಹುಲಿ ಅಭಯಾರಣ್ಯವು ತೆರೆದ ಹುಲ್ಲುಗಾವಲುಗಳಲ್ಲಿ ಮತ್ತು ಪಾಂಡುಪೋಲ್‌ನಂತಹ ದೇವಾಲಯ ನವಿಲುಗಳನ್ನು ನೋಡಲು ಉತ್ತಮ ಸ್ಥಳವಾಗಿದೆ.
ಮಯೂರೇಶ್ವರ ವನ್ಯಜೀವಿ ಅಭಯಾರಣ್ಯ, ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯಲ್ಲಿ ನೆಲೆಗೊಂಡಿರುವ ಈ ಸಣ್ಣ ಅಭಯಾರಣ್ಯಕ್ಕೆ ನವಿಲುಗಳ ಹೆಸರನ್ನು ಇಡಲಾಗಿದೆ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕರ್ನಾಟಕ: ಇನ್ನೂ ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ನೀವು ಭೇಟಿ ನೀಡಿದರೆ ಅಲ್ಲಿರುವ ದಟ್ಟವಾದ ಉದ್ಯಾನವನದಲ್ಲಿ ತುಂಬಾ ಹೆಚ್ಚಿನ ಸಂಖ್ಯೆಯ ನವಿಲುಗಳನ್ನು ನೋಡಬಹುದು.
Tourist Place: ಬೇಸಿಗೆಯಲ್ಲಿ ಈ 5 ಪ್ಲೇಸ್ ಅನ್ನು ಮಿಸ್ ಮಾಡಿಕೊಳ್ಬೇಡಿ! ಎಂಜಾಯ್ ಮಾಡಲು ನಂಬರ್1 ತಾಣವಿದು