ಮಳೆಗಾಲದಲ್ಲಿ ಹುಳು, ಕೀಟಗಳ ಸಮಸ್ಯೆಗೆ ಮನೆಯಲ್ಲಿರಲಿ ಈ ವಸ್ತುಗಳು!
ಮಳೆಗಾಲದಲ್ಲಿ ಮನೆಯೊಳಗೆ ಸೊಳ್ಳೆ, ಎರೆಹುಳ ಸೇರಿದಂತೆ ಅನೇಕ ಜಾತಿಯ ಕೀಟಗಳು ಬರುತ್ತವೆ
ಈ ಕೀಟಗಳ ಕಚ್ಚುವಿಕೆಯಿಂದ ರೋಗಕ್ಕೆ ತುತ್ತಾಗಬೇಕಾಗುತ್ತದೆ
ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಕೀಟಗಳು ಅಡುಗೆ ಮೇಲೆ ಕುಳಿತಾಗ ಸಹಜವಾಗಿಯೇ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ಉಪ್ಪು: ಮಳೆಗಾಲದಲ್ಲಿ ಮನೆಯ ನೆಲ ಸ್ವಚ್ಛಗೊಳಿಸುವಾಗ ಉಪ್ಪನ್ನು ಬಳಸಬೇಕು
ಬೇವಿನ ಸೊಪ್ಪು: ಮನೆಯಲ್ಲಿ ಹಾರುವ ಕೀಟಗಳು ಹೆಚ್ಚಾಗಿದ್ರೆ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಮನೆಗೆ ಸಿಂಪಡಿಸಿ.
ತುಳಸಿ: ಬೇವಿನ ಎಲೆಗಳಂತೆ ತುಳಸಿ ದ್ರಾವಕ ಸಿದ್ಧ ಮಾಡಿಕೊಳ್ಳಿ. ಮರದ ಪೀಠೋಪಕರಣಗಳ ಮೇಲೆ ಸಿಂಪಡಿಸಿದ್ರೆ ನೊಣದ ಸಮಸ್ಯೆ ಇರುವುದದಿಲ್ಲ
ಪುಲಾವ್ ಎಲೆ: ಮಳೆಗಾಲದಲ್ಲಿ ದವಸ ಧಾನ್ಯಗಳಲ್ಲಿ ಹುಳು ಆಗೋದು ಸಾಮಾನ್ಯ, ಹಾಗಾಗಿ ಪುಲಾವ್ ಎಲೆ ಇರಿಸಿದ್ರೆ ಹುಳುಗಳ ಸಮಸ್ಯೆ ನಿವಾರಣೆ ಆಗಲಿದೆ
ಬೆಳ್ಳುಳ್ಳಿ: ಸ್ಪ್ರೇನಲ್ಲಿ ಬೆಳ್ಳುಳ್ಳಿ ವಿನೆಗರ್ ಬಳಕೆ ಮಾಡೋದರಿಂದ ಕೀಟಗಳ ಸಮಸ್ಯೆ ನಿವಾರಣೆ ಆಗುತ್ತೆ
ಅರಶಿನ: ಅರಶಿನವನ್ನು ನೀರಿನಲ್ಲಿ ಮಿಶ್ರಣ ಮಾಡಿ ಜಿರಳೆ ಬರುವ ಜಾಗಕ್ಕೆ ಸಿಂಪಡಿಸಿದ್ರೆ ಜಿರಳೆ ಸಮಸ್ಯೆ ಕಡಿಮೆಯಾಗುತ್ತೆ