ಕೇವಲ ಜನ ಸಾಮಾನ್ಯರಷ್ಟೇ ಅಲ್ಲದೇ ಬಾಲಿವುಡ್ ಸ್ಟಾರ್ ನಟಿಯರು ಕೂಡ ‘So beautiful, so elegant, just looking like a wow’ ಸಾಲುಗಳಿಗೆ ಫಿದಾ ಆಗಿದ್ದಾರೆ
ಇದಲ್ಲದೇ ಇದೀಗ ವರ್ಲ್ಡ್ ಕಪ್ನಲ್ಲಿ ಸೆಂಚುರಿ ಹೊಡೆದ ಕೋಹ್ಲಿ ಫೋಟೋಗೆ ಜನ ಈ ಸಾಲುಗಳನ್ನು ಟ್ವೀಟ್ ಮಾಡಿದ್ದರು
ಹೀಗೆ ಈ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೆಶನ್ ಕ್ರಿಯೆಟ್ ಮಾಡುತ್ತಿದೆ
ಸೋ ಬ್ಯೂಟಿ ಫುಲ್, ಸೋ ಎಲಿಗಂಟ್, ಜಸ್ಟ್ ಲುಕಿಂಗ್ ಲೈಕ್ ವಾವ್.. ಈ ಸಾಲುಗಳು ಈ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ
Shiva Rajkumar: ಕತ್ರಿನಾ ಕೈಫ್, ನಾಗಾರ್ಜುನ್ ಜೊತೆ ಸಿನಿಮಾ ಮಾಡ್ತಿದ್ದಾರಾ ಶಿವಣ್ಣ!? ಅಸಲಿ ಮ್ಯಾಟರ್ ಏನು?
ಮಹಿಳೆಯೊಬ್ಬರು ಹೇಳಿರುವ ಈ ಸಾಲುಗಳನ್ನು ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಆಕೆಯ ಧನಿಗೆ ಜನ ಕ್ಲೀನ್ ಬೋರ್ಡ್ ಆಗಿದ್ದಾರೆ
ಯಾರು ಆ ಮಹಿಳೆ?: ಮೊದಲಿಗೆ ಈ ಸಾಲನ್ನು ಜಾಸ್ಮಿನ್ ಕೌರ್ ಎಂಬ ಮಹಿಳೆ ಸಲ್ವರ್ ಸೂಟ್ಗಳ ಬಗ್ಗೆ ಗ್ರಾಹಕರಿಗೆ ವಿವರಿಸುವ ಭರದಲ್ಲಿ ಹೇಳುತ್ತಾರೆ
ನಂತರ ಈ ಜಾಹೀರಾತು ವೀಡಿಯೋ ಇನ್ಸ್ಟಾಗ್ರಾಮ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ
ವೀಡಿಯೋದಲ್ಲಿ ಮಹಿಳೆಯ ಸಿಹಿಯಾದ ಧ್ವನಿ, ಹೇಳುವ ಶೈಲಿ ಮತ್ತು ಗ್ರಾಹಕರನ್ನು ಮನವೊಳಿಸುವ ಶೈಲಿಗೆ ನೆಟ್ಟಗರು ಮಾರು ಹೋಗಿದ್ದಾರೆ
Instagramನ್ನು ಅಶ್ಲೀಲ ಸೈಟ್‌ಗೆ ಹೋಲಿಸಿ ಟೀಜ್ ಮಾಡಿದ ಎಲಾನ್ ಮಸ್ಕ್! ಹೀಗೆ ಮಾಡಲು ಕಾರಣವಾದ್ರೂ ಏನು?
ಇನ್ನೂ ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಲೈಕ್ಸ್ ಮತ್ತು ಕಾಮೆಂಟ್ಗಳ ಸುರಿಮಳೆಯೇ ಇದಕ್ಕೆ ಹರಿದು ಬರುತ್ತಿದೆ
ವೀಡಿಯೋದಲ್ಲಿ ಬಹಳ ಸರಳ ಲುಕ್ನಲ್ಲಿ ಕಾಣಿಸಿಕೊಂಡಿರುವ ಮಹಿಳೆ ಬಟ್ಟೆಗಳ ಬಗ್ಗೆ ವಿವರಿಸುವಾಗ ನೀಡಿರುವ ವಿವಿಧ ರೀತಿಯ ಸುಂದರವಾದ ಎಕ್ಸ್ಪ್ರೆಶನ್ಗಳು ಜನರ ಮನಗೆದ್ದಿದೆ
ಇದೀಗ ಈ ಸಾಲುಗಳಿಗೆ ಬ್ಯಾಗ್ರೌಂಡ್ ಮ್ಯೂಸಿಕ್ ಹೊಂದಿಸಲಾಗಿದ್ದು, ಅನೇಕ ಬಟ್ಟೆ ವ್ಯಾಪಾರಿಗಳು ತಮ್ಮ ಅಂಗಡಿಯಲ್ಲಿರುವ ಬಟ್ಟೆಗಳನ್ನು ಮಾರಾಟ ಮಾಡಲು ಈ ಸಾಲುಗಳನ್ನು ಬಳಸಿ ಈ ರೀಲ್ಸ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ
ಸದ್ಯ ಜನರಿಂದ ಈ ಸಾಲುಗಳಿಗೆ ಮೆಚ್ಚುಗೆ ಕೇಳಿ ಬರುತ್ತಿದ್ದು, ಜಾಸ್ಮಿನ್ ಕೌರ್ ರಾತ್ರೋ ರಾತ್ರಿ ತಾವು ಫೇಮಸ್ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ
World Cup Semi Finals: ಪಂದ್ಯವಾಡದೇ ವಿಶ್ವಕಪ್‌ನಿಂದ ಹೊರಬೀಳುತ್ತಾ ನ್ಯೂಜಿಲ್ಯಾಂಡ್? ಇದು ಪಾಕ್‌ಗೆ ವರದಾನ!