ಹೌದು, ಒಂದು ಕಾಲದಲ್ಲಿ ಮಹೀಂದ್ರ ಕಂಪನಿ ತನ್ನ ಜೀಪುಗಳ ಉತ್ಪಾದನೆಯನ್ನು ಕೊನೆಗೊಳಿಸಲು ಚಿಂತಿಸಿದ ಸಂದರ್ಭದಲ್ಲಿ ಕಂಪನಿಯ ನಿರ್ಧಾರವನ್ನು ಮತ್ತೊಮ್ಮೆ ಪರಾಮರ್ಶಿಸುವಂತೆ ಮಾಡಿದ್ದು ದಕ್ಷಿಣ ಕನ್ನಡದ ಸುಳ್ಯ ತಾಲೂಕು
ಅಡಿಕೆ ಬೆಳೆಗೆ ಬಂದ ಬಂಪರ್ ಬೆಲೆಯಿಂದಾಗಿ ಈ ತಾಲೂಕಿನ ಜನ ಜೀಪನ್ನೇ ಹೆಚ್ಚಾಗಿ ಖರೀದಿ ಮಾಡುತ್ತಿದ್ದ ಕಾಲವಾಗಿತ್ತು. ಆದರೆ, ಇಂದು ಹಳದಿ ರೋಗವೆನ್ನುವ ಮಹಾಮಾರಿ ಈ ತಾಲೂಕಿನ ಕೃಷಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ
ಸುಳ್ಯ ಈ ಭಾಗದ ಕೃಷಿಕರ ಪ್ರಮುಖ ಬೆಳೆ ಅಡಿಕೆ. 90 ರ ದಶಕದಲ್ಲಿ ಮಾರುಕಟ್ಟೆಯಲ್ಲಿ 40 ರಿಂದ 50 ರೂಪಾಯಿ ಆಸುಪಾಸಿನಲ್ಲಿದ್ದ ಅಡಿಕೆ ಬೆಲೆ ಒಮ್ಮೆಲೆ ಏರಿಕೆಯಾಗಿ 180 ರಿಂದ 200 ರೂಪಾಯಿಗಳ ಗಡಿ ದಾಟಿತ್ತು
ಆ ಸಮಯದಲ್ಲಿ ಹೆಚ್ಚಾಗಿ ಬೆಟ್ಟ ಗುಡ್ಡಗಳನ್ನೇ ಹೊಂದಿರುವ ಸುಳ್ಯ ತಾಲೂಕಿನ ಜನ ತಮ್ಮ ತೋಟದಲ್ಲಿ ಬೆಳೆದ ಅಡಿಕೆಯನ್ನು ಮಾರಿ ಕೇವಲ ಮಹೀಂದ್ರ ಕಂಪನಿಯ ಜೀಪುಗಳನ್ನು ಖರೀದಿಸಿದ್ದರು
ಅದೇ ಸಮಯದಲ್ಲಿ ಮಹೀಂದ್ರ ಕಂಪನಿಯು ಜೀಪಿನ ಉತ್ಪಾದನೆಯನ್ನು ಸಂಪೂರ್ಣ ನಿಲ್ಲಿಸಲು ಚಿಂತನೆಯನ್ನೂ ನಡೆಸಿತ್ತು. ಏಕಾಏಕಿ ಜೀಪುಗಳಿಗೆ ಇಷ್ಟೊಂದು ಬೇಡಿಕೆ ಎಲ್ಲಿಂದ ಬರುತ್ತಿದೆ ಎಂದು ಕಂಪನಿಯ ಉನ್ನತ ಅಧಿಕಾರಿಗಳು ವಿಚಾರಿಸಿದ ಸಂದರ್ಭದಲ್ಲಿ, ಜೀಪುಗಳೆಲ್ಲಾ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಬರುತ್ತಿದೆ ಎನ್ನುವ ವಿಚಾರ ತಿಳಿದುಬಂದಿತ್ತು
ಇಂದಿಗೂ ತಾಲೂಕಿನಾದ್ಯಂತ ಸುಮಾರು 1500ಕ್ಕೂ ಮಿಕ್ಕಿದ ಜೀಪುಗಳು ಸುಳ್ಯ ತಾಲೂಕಿನಲ್ಲಿದೆ. ಕಡಿದಾಗ ಮತ್ತು ಬೆಟ್ಟಗುಡ್ಡಗಳನ್ನು ಹೊಂದಿರುವ ಸುಳ್ಯದ ಹಳ್ಳಿಗಳನ್ನು ಸಂಪರ್ಕಿಸಲು ಜೀಪ್ ಅಲ್ಲದೆ ಬೇರೆ ವಾಹನಗಳಿಗೆ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯೂ ಇದೆ
ಅಂದು ಅಡಿಕೆಯಿಂದ ಒಮ್ಮೆಗೇ ಶ್ರೀಮಂತರಾದ ಸುಳ್ಯದ ಗ್ರಾಮಸ್ಥರು ಜೀಪನ್ನೇ ಹೆಚ್ಚಾಗಿ ಖರೀದಿ ಮಾಡಿದ ಪರಿಣಾಮ ಬಂದ್ ಆಗಬೇಕಿದ್ದ ಜೀಪ್ ಉತ್ಪಾದನೆಯನ್ನು ಮಹೀಂದ್ರ ಕಂಪನಿಯು ಮರು ಉತ್ಪಾದನೆ ಮಾಡಿತ್ತಂತೆ
ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಾರ್ಗಿಲ್ ಯುದ್ಧದ ಚಿತ್ರಣ!