ಚೀಸ್ ಗಾರ್ಲಿಕ್ ಬ್ರೆಡ್ ತಯಾರಿಸಲು ಹೆಚ್ಚಿನ ಸಮಯವಾಗಲಿ, ಸಾಮಾಗ್ರಿಗಳಾಗಿ ಅಗತ್ಯವಿಲ್ಲ

ಬದಲಿಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿ, ಮೈಕ್ರೊವೇವ್ ಸಹಾಯವಿಲ್ಲದೆಯೇ ಗರಿಗರಿಯಾಗಿ ಚೀಸ್ ಗಾರ್ಲಿಕ್ ಬ್ರೆಡ್ ತಯಾರಿಸಬಹುದು

ಅದು ಹೇಗಪ್ಪಾ ಅಂತೀರಾ ಈ ಸ್ಟೋರಿ ಓದಿ

ಸಾಮಾನ್ಯವಾಗಿ ಗಾರ್ಲಿಕ್ ಬ್ರೆಡ್ ಅನ್ನು ದೊಡ್ಡ, ದೊಡ್ಡ ಕೆಫೆ ಮತ್ತು ರೆಸ್ಟೋರೆಂಟ್ಗಳಲ್ಲಿ ಜನರು ತಿನ್ನುತ್ತಾರೆ

ನವರಾತ್ರಿಯಲ್ಲಿ ಒಂದು ಬೆಳಿಗ್ಗೆ ಈ ತಿಂಡಿ ಮಾಡಿ ತಿನ್ನಿ

ಆದರೆ ಇದನ್ನು ಮನೆಯಲ್ಲಿ ತಯಾರಿಸುವುದು ಬಹಳ ಕಡಿಮೆ. ಏಕೆಂದರೆ ಇದನ್ನು ಸಿದ್ಧಪಡಿಸಲು ಮೈಕ್ರೋವೇವ್ ಅಥವಾ ಬೇಕಾದ ಸಾಮಾಗ್ರಿಗಳ ಕೊರತೆ

ವಾಸ್ತವವಾಗಿ ಹೇಳುವುದಾದರೆ ಚೀಸ್ ಗಾರ್ಲಿಕ್ ಬ್ರೆಡ್ ತಯಾರಿಸಲು ಹೆಚ್ಚಿನ ಸಮಯವಾಗಲಿ, ಸಾಮಾಗ್ರಿಗಳಾಗಿ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿ, ಮೈಕ್ರೊವೇವ್ ಸಹಾಯವಿಲ್ಲದೆಯೇ ಗರಿಗರಿಯಾಗಿ ಚೀಸ್ ಗಾರ್ಲಿಕ್ ಬ್ರೆಡ್ ತಯಾರಿಸಬಹುದು. ಅದು ಹೇಗಪ್ಪಾ ಅಂತೀರಾ ಈ ಸ್ಟೋರಿ ಓದಿ

ಗಾರ್ಲಿಕ್ ಬ್ರೆಡ್ ಮಾಡಲು ಬೇಕಾಗುವ ಸಾಮಾಗ್ರಿಗಳು: ಬ್ರೆಡ್ – ಅಗತ್ಯಕ್ಕೆ ತಕ್ಕಷ್ಟು, ಅಮೇರಿಕನ್ ಚೀಸ್, ಬಟರ್ ಸಾಲ್ಟ್ - 150 ಗ್ರಾಂ, ತುರಿದ ಬೆಳ್ಳುಳ್ಳಿ - 2 ಚಮಚ, ಓರೆಗಾನೊ - 1 ಟೀಸ್ಪೂನ್, ಚಿಲ್ಲಿ ಫ್ಲೇಕ್ಸ್ - 1 ಟೀಸ್ಪೂನ್, ಉಪ್ಪು – ಅಗತ್ಯಕ್ಕೆ ತಕ್ಕಷ್ಟು

ಮನೆಯಲ್ಲಿ ಈ ವಸ್ತುಗಳಿದ್ರೆ ದರಿದ್ರ ವಕ್ಕರಿಸುತ್ತೆ

ಗಾರ್ಲಿಕ್ ಬ್ರೆಡ್ ಮಾಡುವ ವಿಧಾನ: ಮೊದಲು ಒಂದು ಬಟ್ಟಲಿನಲ್ಲಿ ಬೆಣ್ಣೆಯನ್ನು ತೆಗೆದುಕೊಳ್ಳಿ

ಅದರಲ್ಲಿ ಓರೆಗಾನೊ, ತುರಿದ ಬೆಳ್ಳುಳ್ಳಿ ಮತ್ತು ಚಿಲ್ಲಿ ಫ್ಲೇಕ್ಸ್ ಮಿಶ್ರಣ ಮಾಡಿ. ಇಷ್ಟವಿದ್ದರೆ ನಿಮಗೆ ಬೇಕಾದಷ್ಟು ಉಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ

ಈಗ ಸ್ಟವ್ ಮೇಲೆ ಪ್ಯಾನ್ ಇಟ್ಟು, ಬ್ರೆಡ್ನ ಎರಡು ಸ್ಲೈಸ್ಗಳನ್ನು ತೆಗೆದುಕೊಂಡು ತಯಾರಿಸಿಟ್ಟುಕೊಂಡ ಮಿಶ್ರಣದಲ್ಲಿ ಹದ್ದಿ. ಈಗ ಎರಡು ಬ್ರೆಡ್ ಸ್ಲೈಸ್ಗಳ ನಡುವೆ ಚೀಸ್ ಸ್ಲೈಸ್ಗಳನ್ನು ಇಟ್ಟು, ಮೀಡಿಯಮ್ ಫ್ಲೇಮ್ನಲ್ಲಿ ರೋಸ್ಟ್ ಮಾಡಿಕೊಳ್ಳಿ

ಬ್ರೆಡ್ ಅನ್ನು ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌವ್ಸ್ ಬಣ್ಣ ಬರುವವರೆಗೆ ಬೇಯಿಸಿ ಮತ್ತು ಚೀಸ್ ಕರಗಿದ್ಯಾ ಎಂದು ಖಚಿತಪಡಿಸಿಕೊಳ್ಳಿ

ಈಗ ತಯಾರಾದ ಗಾರ್ಲಿಕ್ ಬ್ರೆಡ್ ತೆಗೆದುಕೊಂಡು ಅದನ್ನು ಬಿಸಿ ಸಾಸ್ ಅಥವಾ ನಿಮ್ಮ ನೆಚ್ಚಿನ ಚಟ್ನಿ ಜೊತೆಗೆ ಟೇಸ್ಟ್ ಮಾಡಿ