ಮೊದಲು ಜೋಳದ ಹಿಟ್ಟು, ಮೈದಾ ಹಿಟ್ಟು, ಸ್ವಲ್ಪ ಉಪ್ಪು, ಮೆಣಸಿನ ಪುಡಿ ಹಾಗೂ ಒಂದು ಮೊಟ್ಟೆಯ ಬಿಳಿಯ ಭಾಗವನ್ನು ಹಾಕಿಕೊಂಡು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು
ನಂತರ ನಿಮಗೆ ಎಷ್ಟು ಬೇಕು ಅಷ್ಟು ಮೊಟ್ಟೆಯನ್ನು ಬೇಯಿಸಿಕೊಂಡು ಅದನ್ನು ಕತ್ತರಿಸಿಕೊಂಡಿಡಬೇಕು
ಅದೆಲ್ಲವನ್ನೂ ಮಿಕ್ಸ್ ಮಾಡಿಕೊಂಡಿಟ್ಟಿರುವ ಹಿಟ್ಟಿಗೆ ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಕರಿದುಕೊಳ್ಳಬೇಕು
ಈಗ ಎಣ್ಣೆಗೆ ಬಿಟ್ಟ ಮೊಟ್ಟೆಯು ಸ್ವಲ್ಪ ಬೆಂದ ನಂತರ ಅದನ್ನು ಎಣ್ಣೆಯಿಂದ ಎತ್ತಿಕೊಳ್ಳಬೇಕು
ನಂತರ ಸ್ವಲ್ಪ ಕಡಲೆಹಿಟ್ಟು, ಮನೆಯಲ್ಲೆ ಮಾಡಿದ ಅಚ್ಚಕಾರದ ಪುಡಿ, ಮೆಣಸಿಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು
ನಂತರ ಮೊದಲು ಬೇಯಿಸಿದ ಮೊಟ್ಟೆಯನ್ನು ಎತ್ತಿ ಈ ಹಿಟ್ಟಿನೊಂದಿಗೆ ಅದ್ದಿ ಅದನ್ನು ಮತ್ತೆ ಕಾದ ಎಣ್ಣೆಗೆ ಹಾಕಿ ಕರಿದರೆ ರುಚಿ ರುಚಿಯಾದ ಮೊಟ್ಟೆ ಬೋಂಡಾ ಸವಿಯುವುದಕ್ಕೆ ಸಿದ್ಧವಾಗುತ್ತದೆ
ಈ ರೀತಿ ತಯಾರಿಸಿದ ಮೊಟ್ಟೆ ಬಜ್ಜಿಗೆ ಸ್ವಲ್ಪ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪುನ್ನು ಹಾಕಿ ತಿಂದರೆ ಅದರ ರುಚಿಯೇ ಬೇರೆಯದ್ದೇ ಆಗಿರುತ್ತೆ
ಹಾಗಿದ್ರೆ ಮೊಟ್ಟೆ ಬೋಂಡಾವನ್ನ ಈ ಮಳೆಗಾಲದಲ್ಲಿ ನೀವು ನಿಮ್ಮ ಮನೆಯಲ್ಲೇ ಟ್ರೈ ಮಾಡಿ ಟೇಸ್ಟ್ ನೋಡನ್ನ ಮರೀಬೇಡಿ
Bread Upma Recipe: ರುಚಿಯಾದ ಬ್ರೆಡ್ ಉಪ್ಮಾವನ್ನು ಬರೀ 15 ನಿಮಿಷದಲ್ಲಿ ತಯಾರಿಸಿ! ರೆಸಿಪಿ ಇಲ್ಲಿದೆ