ಕೋಡುಬಳೆ ಕರ್ನಾಟಕದ ಸಾಂಪ್ರದಾಯಿಕ ತಿಂಡಿ. ಹಲವಾರು ಜನ ಇದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ
ಅದೇ ರೀತಿ ಇದನ್ನು ಮನೆಯಲ್ಲೇ ಮಾಡುವ ವಿಧಾನವನ್ನು ಬಹಳ ಜನ ಸರ್ಚ್ ಮಾಡುತ್ತಾರೆ. ಹಾಗಾಗಿ ನಾವು ನಿಮಗೆ ರೆಸಿಪಿ ನೀಡಿದ್ದೇವೆ ಗಮನಿಸಿ
ಇದನ್ನು ಮಾಡುವುದು ಸುಲಭವೇನಲ್ಲಾ ಆದರೂ ನೀವು ಸರಿಯಾಗಿ ಪ್ರಯತ್ನಿಸಿದರೆ ಖಂಡಿತ ಇದು ಚೆನ್ನಾಗಿ ಬರುತ್ತದೆ
ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿಯಂತಹ ಹಬ್ಬಗಳ ಸಮಯದಲ್ಲೂ ಹಲವಾರು ಜನರು ಇದನ್ನು ಮಾಡುತ್ತಾರೆ
ಮದುಮಗಳು ಮೊದಲ ರಾತ್ರಿ ಹಾಲು ತಂದು ವರನಿಗೆ ಕುಡಿಯಲು ಹೇಳೋದು ಏಕೆ ಗೊತ್ತಾ?
ಮೊದಲಿಗೆ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. ನಿಮಗೆ ಎಷ್ಟು ಬೇಕೋ ಅಷ್ಟನ್ನು ಹಾಕಿಕೊಳ್ಳಿ
ನಂತರ ತೆಂಗಿನ ತುರಿ, ಇಂಗು ಹಾಗೂ ಒಣಮೆಣಸು ಹಾಗೂ ಎಳ್ಳು ಅಜ್ವಾನ ತೆಗದಿಟ್ಟುಕೊಳ್ಳಿ
ಖಾರದ ಪುಡಿಯನ್ನು ಅಕ್ಕಿ ಹಿಟ್ಟಿಗೆ ನೀವು ಮಿಕ್ಸ್ ಮಾಡಿ. ಅದನ್ನು ಮಿಕ್ಸ್ ಮಾಡಿ
ಎಲ್ಲವನ್ನೂ ಬಿಸಿ ನೀರನ್ನು ಹದವಾಗಿ ಹಾಕಿಕೊಂಡು ಕೊಂಚವೇ ಕಲಸಿಕೊಳ್ಳಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅದನ್ನು ಗೋಲಾಕಾರವಾಗಿ ಕೈಯಲ್ಲಿ ಸುತ್ತಿಕೊಳ್ಳಿ
ಅದು ಹೆಚ್ಚು ದಪ್ಪವಾಗಿರಲಿ ತುಂಬಾ ತೆಳ್ಳಗಾಗಿದ್ದರೆ ಬೇಗ ಸೀದು ಹೋಗುತ್ತದೆ ಮತ್ತು ಆ ಸ್ವಾದ ನಿಮಗೆ ಸಿಗೋದಿಲ್ಲ
ನಂತರ ಮೀಡಿಯಮ್ ಉರಿಯಲ್ಲಿ ನೀವು ಎಣ್ಣೆಯನ್ನು ಬಿಸಿ ಮಾಡಿ ನಂತರ ಅದು ಸರಿಯಾಗಿ ಬಿಸ ಆಗಿದ್ಯಾ ಇಲ್ವಾ ಅಂತ ಚೆಕ್ ಮಾಡಿ
ನಂತರ ಎಣ್ಣೆಯಲ್ಲಿ ನೀವು ಒಂದೊಂದಾಗಿ ಒಂದಕ್ಕೊಂದು ಅಂಟಿಕೊಳ್ಳದೇ ಇದ್ದ ಹಾಗೆ ಎಣ್ಣೆಯಲ್ಲಿ ಬಿಡಿ
ಈಗ ಇದು ತಿನ್ನಲು ರೆಡಿ ಆಗುತ್ತದೆ. ಹಲವು ದಿನಗಳ ಕಾಲ ನೀವು ಇದನ್ನು ಶೇಖರಿಸಿ ಕೂಡ ಇಡಬಹುದು. ಮಕ್ಕಳು ಇದನ್ನು ತುಂಬಾ ಇಷ್ಟಪಡುತ್ತಾರೆ
ಭಾರತದಲ್ಲಿ ಬೆಳಗ್ಗೆ, ಆದ್ರೆ ಜಪಾನ್, ಚೀನಾ, ಕೊರಿಯಾದಲ್ಲಿ ಸಂಜೆ ಸ್ನಾನ ಮಾಡ್ತಾರೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!