ಬಂಧಿತ IRS ಅಧಿಕಾರಿ ಜೊತೆ ಗಜ ನಟಿ ಡೇಟಿಂಗ್!

ಬಂಧಿತ ಅಧಿಕಾರಿ ಸಚಿನ್ ಸಾವಂತ್, ನಟಿ ನವ್ಯಾ ನಾಯರ್ ಇಬ್ಬರ ನಡುವೆ ಸಂಪರ್ಕ ಇರುವ ವಿಚಾರ ಇಡಿ ತನಿಖೆ ವೇಳೆ ಬಯಲಾಗಿದೆ

ನಟಿಗೆ ಸಚಿನ್ ಆಭರಣ ಸೇರಿದಂತೆ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕಂದಾಯ ಇಲಾಖೆ ಅಧಿಕಾರಿ ಸಚಿನ್ ಸಾವಂತ್ ಅವರು ಜನಪ್ರಿಯ ನಟಿ ನವ್ಯಾ ನಾಯರ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು

ಮತ್ತು ಅವರಿಗೆ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ

2011ರಿಂದ 2020ರ ಅವಧಿಯಲ್ಲಿ ಆದಾಯಕ್ಕಿಂತ 2 ಕೋಟಿ 46 ಲಕ್ಷ ರೂ.ಗಳಷ್ಟು ಆಸ್ತಿ ಸಂಪಾದಿಸಿರುವ ಐಆರ್ ಎಸ್ ಅಧಿಕಾರಿ ಸಚಿನ್ ಸಾವಂತ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ

ಈ ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ

ನಂತರ ಅವರನ್ನು ಕಳೆದ ಜೂನ್‍ನಲ್ಲಿ ಬಂಧಿಸಲಾಗಿತ್ತು

ಈ ಪ್ರಕರಣದ ತನಿಖೆ ವೇಳೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿರುವ ನವ್ಯಾ ನಾಯರ್ ಅವರೊಂದಿಗೆ ಸಚಿನ್ ಸಾವಂತ್ ಡೇಟಿಂಗ್ ವಿಚಾರ ಹೊರಬಿದ್ದಿದೆ

ನವ್ಯಾ ನಾಯರ್ ಅವರು ಸಚಿನ್ ತಮ್ಮ ಸ್ನೇಹಿತ ಮಾತ್ರ, ಅವರ ನಡುವೆ ಬೇರೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರಂತೆ