ಪ್ಯಾರೀಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್‌‌ನಲ್ಲಿ ಮಂಗಳೂರಿನ ಅಥ್ಲೆಟಿಕ್ ಪೂವಮ್ಮ.

ಮಂಗಳೂರಿನ ಪೂವಮ್ಮ ರಿಲೆಯಲ್ಲಿ ಚಿನ್ನದ ಬೇಟೆಯ ನಿರೀಕ್ಷೆಯಲ್ಲಿದ್ದಾರೆ.

ಆಗಸ್ಟ್ 9ರಂದು ನಡೆಯುವ 400×400 ಮೀಟರ್ ರಿಲೆಯ ತಂಡದಲ್ಲಿ ಪೂವಮ್ಮ ಕೂಡ ಒಬ್ಬರು.

ಈ ಹಿಂದೆ ಎರಡು ಬಾರಿ ಪೂವಮ್ಮ ಒಲಿಂಪಿಕ್‌ನಲ್ಲಿ ಭಾಗವಹಿಸಿದ್ದರು.

ಆದರೆ ಅವರ ತಂಡದ ಕೊರಳಿಗೆ ಗೆಲುವಿನ ಜಯಮಾಲೆ ಮಾತ್ರ ಬಿದ್ದಿರಲಿಲ್ಲ.

ಆದರೆ ಈ ಬಾರಿ ಪೂವಮ್ಮರ ತಂಡ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಅವರ ಹೆತ್ತವರಲ್ಲಿದೆ.

ಖಂಡಿತಾ ಈ ಬಾರಿ ಪೂವಮ್ಮರ ತಂಡ ಫೈನಲ್ ತಲುಪಿ ಚಿನ್ನದ ಪದಕ ಗೆಲ್ಲುತ್ತದೆ ಎಂಬ ಮಹದಾಸೆ ಅವರಲ್ಲಿದೆ.

ಕರ್ನಾಟಕ ಸರಕಾರ ಮಾತ್ರ ರಾಜ್ಯದ ಆಟಗಾರರಿಗೆ ಯಾವುದೇ ಪ್ರೋತ್ಸಾಹ ಕೊಡುತ್ತಿಲ್ಲ.

ಒಲಿಂಪಿಕ್ ತಯಾರಿಗೆ ಸಾಕಷ್ಟು ಖರ್ಚು ಆಗುತ್ತದೆ‌. ಆದ್ದರಿಂದ ಕೈಯಿಂದ ಹಣ ಹಾಕಿ ಅಭ್ಯಾಸ ಮಾಡಬೇಕಾಗುತ್ತದೆ.

2013, 2015, 2019ರಲ್ಲಿ ಏಷ್ಯಡ್ ಗೇಮ್ಸ್‌ನಲ್ಲಿ ಸಾಧನೆ ಮಾಡಿದ್ದರೂ ಕರ್ನಾಟಕ ಸರಕಾರದಿಂದ ಯಾವುದೇ ಧನಸಹಾಯ ದೊರಕಿಲ್ಲ.

ಪೂವಮ್ಮ ಅವರ ಚಿನ್ನದ ಪದಕದ ದಾಹ ಈ ಬಾರಿ ಈಡೇರಲಿ ಅನ್ನೋದು ಅವರ ಹೆತ್ತವರ ಆಸೆಯಾಗಿದೆ.