ಅದು ಚಿಟ್ಟೆಗಳ ಲೋಕ. ಅಲ್ಲಿ ಕಾಣದ ಚಿಟ್ಟೆಗಳಿಲ್ಲ. ಮನಸೋಲಿಸದ ಪಾತರಗಿತ್ತಿಗಳಿಲ್ಲ. ಸುಂದರ ವಾತವರಣದ ನಡುವೆ ನೂರಾರು ಚಿಟ್ಟೆಗಳು ಸ್ವಚ್ಛಂಧವಾಗಿ ಹಾರಾಡುತ್ತಿರುತ್ತದೆ
ಅಷ್ಟಕ್ಕೂ ಸಮ್ಮಿಲನ್ ಶೆಟ್ಟಿ ಪಾರಗಿತ್ತಿಯ ಲೋಕ ಸ್ರಷ್ಠಿ ಮಾಡಿರೋದರ ಹಿಂದೆ ಉದಾರತನವಿದೆ. ಚಿಟ್ಟೆಗಳ ಮೇಲಿನ ಅತ್ಯಂತ ಪ್ರೀತಿಯಿದೆ, ಚಿಟ್ಟೆಗಳನ್ನು ಸಂರಕ್ಷಿಸಬೇಕೆಂಬ ಪರಮೋಚ್ಛ ಗುರಿಯಿದೆ
ಸಮ್ಮಿಲನ್ ಶೆಟ್ಟಿ ಕಾಲೇಜು ಜೀವನದಲ್ಲಿಯೇ ಚಿಟ್ಟೆಗಳ ಬಗ್ಗೆ ಆಪರಿಮಿತ ಆಸಕ್ತಿಯನ್ನು ಹೊಂದಿದ್ದರು. ಪತಂಗಗಳ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದರು
ಬಿಡುವಿದ್ದಾಗ ಚಾರಣ ಹೋಗುತ್ತಿದ್ದ ಸಮ್ಮಿಲನ್ ಗೆ ಕಾಡಿನಲ್ಲಿ ಸಿಗುತ್ತಿದ್ದ ಚಿಟ್ಟೆಗಳನ್ನು ಸೂಕ್ಷ್ಮ ವಾಗಿ ಗಮನಿಸುವ ಮನೋಭಾವ ಹೊಂದಿದ್ದರು. ಅದಕ್ಕೆ ತಕ್ಕಂತೆ ಆಳ್ವಾಸ್ ಕಾಲೇಜಿನಲ್ಲಿ BSC ಪದವಿ ಮಾಡುತ್ತಿದ್ದಾಗ Biology department ನ ಪ್ರಾಜೆಕ್ಟ್ ಸಮ್ಮಿಲನ್ ಉತ್ಸಾಹ ಕ್ಕೆ ಮತ್ತಷ್ಟು ಜೀವ ತುಂಬಿತ್ತು
Studies of local butterfly ಅನ್ನುವ ಸಂಶೋಧನಾ ಪ್ರಾಜೆಕ್ಟ್ ಸಮ್ಮಿಲನ್ ಗೆ ಚಿಟ್ಟೆಗಳ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿತ್ತು. ಪದವಿ ಮುಗಿದ ಬಳಿಕ MBA ಪದವಿ ಮಾಡಿ,ಮಂಗಳೂರಿನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಯೂ ಕೆಲ ಕಾಲ ಸೇವೆ ಸಲ್ಲಿಸಿದ್ರು
ಪ್ರಾಧ್ಯಪಕರಾಗಿದ್ರೂ ಸಮ್ಮಿಲನ್ ಮನಸ್ಸು ಮಾತ್ರ ಚಿಟ್ಟೆಗಳ ಮೇಲೆಯೇ ಹೊರಳಿತ್ತು. ಪತಂಗಗಳಂದ್ರೆ ಪಂಚಪ್ರಾಣವಾಗಿದ್ದರಿಂದ, ಆಧುನೀಕರಣ, ಕೈಗಾಗರೀಕರಣದ ಪ್ರಭಾವದಿಂದ ನಶಿಸಿಹೋಗುತ್ತಿದ್ದ ಚಿಟ್ಟೆಗಳ ಉಳಿವಿಗಾಗಿ ಹೊಸ ಯೋಜನೆ, ಯೋಚನೆಗೆ ಮುನ್ನುಡಿಯಿಟ್ಟರು
ಜೂನ್ ನಿಂದ ನವೆಂಬರ್ ತನಕ ಸಮ್ಮಿಲನ್ ಶೆಟ್ಟಿ ಚಿಟ್ಟೆ ಪಾರ್ಕ್ ನಲ್ಲಿ ಪತಂಗ ಲೋಕ ವೈಭವದಿಂದ ಕೂಡಿದ್ದು ದಿನದಲ್ಲಿ 40 ಪ್ರಬೇಧ ದ ಚಿಟ್ಟೆಗಳೂ ಕಾಣ ಸಿಗುತ್ತದೆ. ಆದ್ರೆ ಜಾಸ್ತಿ ಮಳೆ,ಮೋಡ ಮುಸುಕಿದ ವಾತವರಣ ಇದ್ರೆ ಚಿಟ್ಟೆ ಹಾರಾಡಲು ಉದಾಸೀನ ತೋರುತ್ತದೆ. ಸ್ವಲ್ಪ ಬಿಸಿಲಿನ ವಾತವರಣ ಇದ್ರೆ ಪಾರ್ಕ್ ತುಂಬಾ ಚಿಟ್ಟೆಗಳ ಕಲರವ ಕಾಣಬಹುದಾಗಿದೆ