ಆದಾಯದಲ್ಲಿ ದಾಖಲೆ ಬರೆದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ!
ದಕ್ಷಿಣ ಭಾರತದ ಹೆಸರಾಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಈ ಬಾರಿಯೂ ದಾಖಲೆಯ ಆದಾಯ ಗಳಿಸಿದೆ
ಸತತ 13 ವರ್ಷದಿಂದ ರಾಜ್ಯದ NO-1 ಶ್ರೀಮಂತ ದೇವಾಲಯ ಎಂಬ ಪ್ರಸಿದ್ಧಿ ಪಡೆದಿದೆ.
ಈ ಬಾರಿ ಕುಕ್ಕೆ ದೇಗುಲದ ಆದಾಯ ದಾಖಲೆಯನ್ನು ಬರೆದಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವಾರ್ಷಿಕ ಆದಾಯ ಲೆಕ್ಕಪಟ್ಟಿ ಬಿಡುಗಡೆಯಾಗಿದೆ.
2007 ರಲ್ಲಿ 19.76 ಕೋಟಿಯಿಂದ ಆರಂಭವಾದ ದೇಗುಲದ ಆದಾಯ ಈಗ 146.01 ಕೋಟಿಗೆ ಬಂದು ನಿಂತಿದೆ.
2023-2024 ರ ವಾರ್ಷಿಕ ಆದಾಯದ ಲೆಕ್ಕಾಚಾರ ನಡೆದಿದ್ದು ಕುಕ್ಕೆ ಕಳೆದ ಬಾರಿಗಿಂತ 23 ಕೋಟಿರೂ ಅಧಿಕ ಲಾಭ ಪಡೆದಿದೆ.
ಕಳೆದ ವರ್ಷ ದೇವಾಲಯದ ಆದಾಯ 123 ಕೋಟಿ ರೂಪಾಯಿ ಆಗಿತ್ತು.
ಕುಕ್ಕೆಯ ಆದಾಯದ ಮೂಲಗಳು ಮುಖ್ಯವಾಗಿ ಕಟ್ಟಡ ಬಾಡಿಗೆ, ಕಾಣಿಕೆ ಹುಂಡಿ, ಹರಕೆ ಸೇವೆಗಳಿಂದ ಆದಾಯ ಬರುತ್ತಿದೆ.
2007-08ರಲ್ಲಿ 24.44 ಕೋಟಿಯಾಗುವ ಮೂಲಕ ರಾಜ್ಯದ ನಂಬರ್ ಒನ್ ಶ್ರೀಮಂತ ದೇಗುವ ಎಂಬ ಪಟ್ಟ ಅಲಂಕಾರ ಮಾಡಿತ್ತು.