ಸಂಜೆ ಅಥವಾ ನಿಮಗೆ ಕುರುಕಲು ತಿಂಡಿ ಬೇಕು ಎಂದಾದಾಗ ನಿಮಗೆ ತಿನ್ನಲು ಸಿದ್ಧಪಡಿಸಿಕೊಳ್ಳಬಹುದಾದ ಉತ್ತಮ ರೆಸಿಪಿ ಇಲ್ಲಿದೆ
ಚಹಾ ಜೊತೆಗೆ ಅಥವಾ ಮಕ್ಕಳು ಶಾಲೆಯಿಂದ ಬಂದ ನಂತರ ಏನಾದರೂ ತಿನ್ನಲು ಬಯಸುತ್ತಾರೆ ಆಗ ನೀವಿದನ್ನು ಕೊಡಬಹುದು
ಮೊದಲಿಗೆ ನೀವು ಶೇಂಗಾ/ ಕಡಲೆ ತೆಗದುಕೊಳ್ಳಿ ಅದರ ಸಿಪ್ಪೆಗಳನ್ನು ಬಿಡಿಸಿ ಚೆನ್ನಾಗಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ
ಬಿಸಿ ಇರುವಾಗ ಇದು ತುಂಬಾ ಕ್ರಂಚಿಯಾಗಿರುತ್ತದೆ
Fitness Tips: ಈ ತಪ್ಪುಗಳನ್ನು ಮಾಡುತ್ತಿದ್ದರೆ ಜಪ್ಪಯ್ಯ ಅಂದ್ರೂ ನಿಮ್ಮ ತೂಕ ಕಡಿಮೆ ಆಗಲ್ಲ ಎಚ್ಚರ!
ಇನ್ನು ನಂತರ ಒಂದು ಬೌಲ್ನಲ್ಲಿ ಖಾರದಪುಡಿ, ಜೀರಿಗೆ ಪುಡಿ, ಧನಿಯಾಪುಡಿ ಹಾಕಿಕೊಳ್ಳಿ
ಬೌಲ್ನಲ್ಲಿ ಹಾಕಿಟ್ಟುಕೊಂಡ ನಂತರ ಅದಕ್ಕೆ ಉಪ್ಪು ಸೇರಿಸಿ ಎಣ್ಣೆ ಹಾಕಿ ಅವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಕಡಲೆ ಹಿಟ್ಟಿಗೆ ಅದನ್ನು ಹಾಕಿ
ನಂತರ ಕಲಿಸಿಟ್ಟುಕೊಂಡ ಕಡಲೇ ಹಿಟ್ಟಿನಲ್ಲಿ ಗಂಟಿಲ್ಲದಂತೆ ನೋಡಿಕೊಳ್ಳಿ
ನಂತರ ಆ ಹಿಟ್ಟಿನಲ್ಲಿ ಶೇಂಗಾ ಬೀಜಗಳನ್ನು ಹಾಕಿ
ನಂತರ ಆ ಶೇಂಗಾ ಬೀಜಗಳು ಬಿಡಿ ಬಿಡಿಯಾಗಿರುವಂತೆ ನೋಡಿಕೊಂಡು ಅದನ್ನು ಎಣ್ಣೆಯಲ್ಲಿ ಕರಿಯಿರಿ ಇದರಿಂದ ಒಂದಕ್ಕೊಂದು ಕೂಡುವುದಿಲ್ಲ
ಹೀಗೆ ಮಾಡಿದ್ರೆ ಬೇಕರಿಯಲ್ಲಿ ಸಿಗುವ ಮಸಾಲಾ ಶೇಂಗಾ ಮನೆಯಲ್ಲೇ ಸಿದ್ದವಾಗುತ್ತೆ
Home Interior: ನಿಮ್ಮ ಮನೆಯ ಫ್ಯಾನ್ ಸ್ಪೀಡಾಗಿ ತಿರುಗ್ತಲ್ವಾ? ಹೀಗೆ ಮಾಡಿ ವೇಗ ಹೆಚ್ಚಿಸಿ!