ಮುಂಬೈನ ಸುಪ್ರಸಿದ್ಧ ಲಾಲ್ಬಾಗ್ಚಾ ರಾಜ ಗಣಪತಿ!
ಲಾಲ್ಬಾಗ್ಚಾ ರಾಜಾ ಎಂದು ಕರೆಯಲ್ಪಡುವ ಮುಂಬೈನ ಅತ್ಯಂತ ಜನಪ್ರಿಯ ಗಣೇಶ ಮಂಡಲವಾಗಿದೆ.
'ಲಾಲ್ಬಾಗ್ ರಾಜ' ಭಾರತದ ಆರ್ಥಿಕ ರಾಜಧಾನಿಯಲ್ಲಿ ಅತಿ ಹೆಚ್ಚು ಭೇಟಿ ನೀಡುವ ಗಣೇಶ ಮಂಡಲವಾಗಿದೆ.
ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಲಕ್ಷಾಂತರ ಜನ ಲಾಲ್ಬಾಗ್ಚಾ ರಾಜ ದರ್ಶನ ಪಡೆಯುತ್ತಾರೆ.
ಈ ವೇಳೆ ವಿವಿಧ ಸ್ಥಳಗಳಿಂದ ಸಾವಿರಾರು ಭಕ್ತರನ್ನು ಸೆಳೆಯುತ್ತದೆ.
ಸೆಪ್ಟೆಂಬರ್ 7 ರಂದು ಗಣೇಶೋತ್ಸವ ಮಹಾರಾಷ್ಟ್ರದಲ್ಲಿ ಅದ್ಧೂರಿ ಯಾಗಿ ಆಚರಿಸಲಾಗುತ್ತದೆ.
ಇಲ್ಲಿ ಹತ್ತು ದಿನಗಳ ಕಾಲ ಆಚರಣೆಗಳು ಮತ್ತು ಹಬ್ಬಗಳಿಂದ ತುಂಬಿರುತ್ತದೆ.
ಆ ನಂತರ ಈ ಇಲ್ಲಿ ಪ್ರತಿಷ್ಠಾಪಿಸುವ ಗಣೇಶನ ವಿಗ್ರಹ ವಿಸರ್ಜನೆಯೂ ಬಹಳ ಸಡಗರದಿಂದ ಮಾಡಲಾಗುತ್ತದೆ.
ವಿಗ್ರಹವನ್ನು ವಿವಿಧ ವೇಷಭೂಷಣಗಳಲ್ಲಿ ಅಲಂಕರಿಸಲಾಗುತ್ತದೆ ಮತ್ತು ರಾಜನಂತೆ ಆಚರಿಸಲಾಗುತ್ತದೆ.
ಲಾಲ್ಬಾಗ್ಚಾ ರಾಜಾಗೆ 15 ಕೋಟಿ ರೂಪಾಯಿ ಮೌಲ್ಯದ 20 ಕೆಜಿ ಚಿನ್ನದ ಕಿರೀಟವನ್ನು ದೇಣಿಗೆಯಾಗಿ ನೀಡಿದ್ದಾರೆ.