ನಂಜನಗೂಡು ನಂಜುಂಡೇಶ್ವರನ ಮೂಲ ದೇವಸ್ಥಾನ ಇರೋದು ಇಲ್ಲಿ!

ನಂಜನಗೂಡಿನ ನಂಜುಂಡೇಶ್ವರನ ಮೂಲ ದೇವಸ್ಥಾನ ಇರೋದು ಇಲ್ಲಿ ಅನ್ನೋ ನಂಬಿಕೆ ಇದೆ.

ಆದ್ರೆ ನಂಜುಡೇಶ್ವರನ ಮೂಲಸ್ಥಾನವೆಂದೇ ಕರೆಯಲ್ಪಡುವ ಈ ದೇಗುಲದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.

ಸುಮಾರು300 ವರ್ಷಗಳ ಹಳೆಯ ಈ ದೇಗುಲವನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿದ್ದ ಒಂದು ಕಥೆಯಿದೆ.

ನಂಜನಗೂಡು ಪಟ್ಟಣದ ಚಿಕ್ಕಯ್ಯನಛತ್ರ ಸಮೀಪದಲ್ಲಿರುವ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ದೇವಸ್ಥಾನ.

ಮುಮ್ಮಡಿ ಕೃಷ್ಣರಾಜ ಒಡೆಯರ್‌ ದೇವರ ಮೂರ್ತಿಯನ್ನು ಹೊಸದಾಗಿ ನಿರ್ಮಿಸಲು ಮುಂದಾಗಿದ್ದೇ ಈ ದೇಗುಲದ ಹುಟ್ಟಿಗೂ ಕಾರಣವಾಯಿತು.

ನಂಜುಂಡೇಶ್ವರನ ಶಕ್ತಿ ಕುಂದಿದೆ ಎಂದು ಭಾವಿಸಿದ ಒಡೆಯರು ಹೊಸದಾಗಿ ದೇವರ ಮೂರ್ತಿ ಕೆತ್ತನೆಗೆ ಮುಂದಾಗ್ತಾರೆ.

ಅಲ್ಲಿಂದ ಇಲ್ಲಿಯವರೆಗೂ ದೇವಸ್ಥಾನ ನಿರ್ಮಿಸಿ ಇಲ್ಲಿ ನಿತ್ಯ ಪೂಜೆ ನಡೆದುಕೊಂಡು ಬಂದಿದೆ.

ಒಡೆಯರಿಗೆ ಈಶ್ವರ ಈ ಜಾಗದಲ್ಲಿ ಪ್ರಸನ್ನನಾಗಿದ್ದರಿಂದ ಇದನ್ನೇ ಜನರು ಮೂಲ ದೇವಸ್ಥಾನ ಎಂದು ನಂಬಿದ್ದಾರೆ.

ಶಿವರಾತ್ರಿ ಹಬ್ಬ, ಕಾರ್ತಿಕ ಮಾಸದ ವಿಶೇಷ ಪೂಜೆ, ಜಾತ್ರೆಯು ವಿಜೃಂಭಣೆಯಿಂದ ಜರುಗುತ್ತದೆ.