ಒಲಿಂಪಿಕ್ಸ್ 2024 ರ ಜಾವೆಲಿನ್ ಥ್ರೋ ಪಂದ್ಯದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಹೋರಾಟ ಭಾರೀ ಕುತೂಹಲ ಮೂಡಿಸಿತ್ತು.
ಗುರುವಾರ ತಡರಾತ್ರಿ ನಡೆದ ಪುರುಷರ ಜಾವೆಲಿನ್ ಥ್ರೋವರ್ ಫೈನಲ್‌ನಲ್ಲಿ ಪಾಕಿಸ್ತಾನ ಚಿನ್ನಕ್ಕೆ ಮುತ್ತಿಟ್ಟಿದೆ.
ನೀರಜ್ ಅವರು ಮೊದಲ ಪ್ರಯತ್ನದಲ್ಲಿ ಕಾಲು ಗೆರೆ ತಾಗಿದ್ದರ ಪರಿಣಾಮ ಫೌಲ್ ಆಗಿ ವಿಫಲರಾಗಿದ್ದರು.
ನೀರಜ್ ಆದರೆ 2ನೇ ಪ್ರಯತ್ನದಲ್ಲಿ 89.45 ಮೀಟರ್ ಗಳಿಗೆ ಭರ್ಜಿ ಎಸೆದಿದ್ದರು.
ನೀರಜ್ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಎರಡನೇ ಪುರುಷ ಅಥ್ಲೀಟ್ ಎಂಬ ಇತಿಹಾಸವನ್ನು ಸೃಷ್ಟಿಸಿದರು.
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾಗೆ ಮೋದಿ, ರಾಹುಲ್ ಗಾಂಧಿ ಸೇರಿ ಗಣ್ಯರಿಂದ ಶ್ಲಾಘನೆ.
ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ನೀರಜ್ ಚೋಪ್ರಾ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಮತ್ತು ಇತಿಹಾಸ ಬರೆದಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು.