ನೀರಜ್ ಚೋಪ್ರಾ ಭಾರತದ ಚಿನ್ನದ ಹುಡುಗ. ಈ ಬಾರಿಯ ಪ್ಯಾರಿಸ್ ಒಲಂಪಿಕ್ಸ್‌ನಲ್ಲೂ ಬೆಳ್ಳಿ ಪದಕದ ಸಾಧನೆ ಮೆರೆದಿದ್ದಾರೆ.
26 ನೇ ವಯಸ್ಸಿನಲ್ಲಿ ವಿವಿಧ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ 9 ಪದಕಗಳನ್ನು ಗಳಿಸಿ ಹೋದಲ್ಲೆಲ್ಲಾ ಗೆಲುವಿನ ಪೋಡಿಯಂ ಹತ್ತುವ ಅವರ ಹಿಂದೆ ಶಿರಸಿಯ ಹಳ್ಳಿಯೊಂದರ ಕೋಚ್‌ನ ಪರಿಶ್ರಮ ಅಗಾಧ.
ಅದು ಯಾವ ಮಟ್ಟಕ್ಕೆಂದರೆ ಯಾವುದೇ ಪದಕವನ್ನು ಗೆದ್ದರೂ ನೀರಜ್ ಇವರ ಮನೆಗೆ ಭೇಟಿ ಕೊಡುತ್ತಾರೆ!
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬೆಂಗಳೆ ಗ್ರಾಮದ ಹೆಮ್ಮೆಯ ವೀರಯೋಧ, ದೇಶ ಕಂಡ ಅದ್ಭುತ ಅಥ್ಲೀಟ್ ಕಾಶಿನಾಥ್ ನಾಯ್ಕ್.
ಹೌದು, ಸ್ವತಃ ಜಾವೆಲಿನ್ ಪಟು ಹಾಗೂ 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗಳಿಸಿದ್ದ ಕಾಶೀನಾಥ್ ನಾಯ್ಕ್ ಅವರು 2015-16 ನೇ ಇಸವಿಯಲ್ಲಿ ನೀರಜ್ ಅವರಿಗೆ ಕೋಚ್ ಆಗಿದ್ದವರು.
ಅವರ ಮಾರ್ಗದರ್ಶನದಲ್ಲಿ ಹಲವು ಸ್ಪರ್ಧೆಗಳನ್ನು ನೀರಜ್ ಆಡಿ ಪದಕ ಗಳಿಸಿದ್ದರು. ಆರಂಭದಲ್ಲಿ 70 ಮೀಟರ್ ದಾಟಿಸುತ್ತಿದ್ದ ಜಾವೆಲಿನ್ ಇಂದು 90 ಮೀಟರ್‌ನ ಸಮೀಪಕ್ಕೆ ಬಂದಿದೆ ಅಂದರೆ ನಮ್ಮ ಕನ್ನಡಿಗ ಕಾಶೀನಾಥ್ ನಾಯ್ಕ್ ಅವರ ತರಬೇತಿಯೂ ಮರೆಯುವಂತಿಲ್ಲ.
ಅದಲ್ಲದೇ ನೀರಜ್ ಅವರನ್ನು ಸುಬೇದಾರ್ ಆಗುವಂತೆ ಪ್ರೇರೇಪಿಸಿದ್ದು ಕೂಡ ಇದೇ ಕಾಶೀನಾಥ್ ನಾಯ್ಕ್ ಅವರು.
2016 ರಲ್ಲಿ ನೀರಜ್ ಅವರನ್ನು ಆರ್ಮಿಗೆ ಜಾಯಿನ್ ಮಾಡಿಸುತ್ತಾರೆ. ಅಲ್ಲಿಂದ ನೀರಜ್ ವಿಜಯಯಾತ್ರೆ ಶುರುವಾಗುತ್ತದೆ.
ನೀರಜ್ ಗೆಲ್ಲುವ ಕುದುರೆಯಾಗಿ ಬಿಡುತ್ತಾರೆ. ಇದೇ ಕಾಶೀನಾಥ್ ನಾಯ್ಕ್‌ರನ್ನು ನೀರಜ್ ಕೂಡಾ ಅಷ್ಟೇ ಇದುವರೆಗೂ ಮರೆತಿಲ್ಲ.
ಪ್ರತಿ ಕ್ರೀಡಾಕೂಟದಲ್ಲಿ ಗೆದ್ದು ಮನೆಗೆ ಬರಬೇಕಾದರೆ ಕಾಶೀನಾಥ್ ನಾಯ್ಕ್ ಅವರನ್ನ ಭೇಟಿಯಾಗುತ್ತಾರೆ.
ನೀರಜ್ ಚೋಪ್ರಾ ಭಾರತದ ಚಿನ್ನದ ಹುಡುಗ. ಈ ಬಾರಿಯ ಪ್ಯಾರಿಸ್ ಒಲಂಪಿಕ್ಸ್‌ನಲ್ಲೂ ಬೆಳ್ಳಿ ಪದಕದ ಸಾಧನೆ ಮೆರೆದಿದ್ದಾರೆ.
ಈ ಮೂಲಕ ಗುರುವಿನ ಆಶೀರ್ವಾದದೊಂದಿಗೆ ಸದಾ ಮುಂದುವರೆಯುತ್ತಾರೆ ಭಾರತದ ಗೋಲ್ಡನ್ ಬಾಯ್.
ರೋಹಿತ್ vs ಕೊಹ್ಲಿ; ಬಾಂಗ್ಲಾ ಸರಣಿಗೂ ಮುನ್ನ ಎದುರಾಳಿಗಳಾಗಿ ಸೆಣೆಸಲಿದ್ದಾರೆ ಸ್ಟಾರ್ ಪ್ಲೇಯರ್ಸ್!