ಸೊಸೆಯನ್ನು ಆಷಾಢ ಮುಗಿಯುವರೆಗೂ ತವರು ಮನೆಗೆ ಕಳುಹಿಸುವ ಸಂಪ್ರದಾಯ ನಮ್ಮಲಿದೆ.
ಹೊಸದಾಗಿ ಮದುವೆಯಾದ ಜೋಡಿ ಆಷಾಢಮಾಸದಲ್ಲಿ ಜೊತೆಗಿರಬಾರದೆಂದು ಹೇಳುತ್ತಾರೆ.
ಆದರೆ ಇದು ಸಂಪ್ರದಾಯ ಅಷ್ಟೇ ಅಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.
ಆಷಾಢ ಮಾಸವನ್ನು ಶೂನ್ಯ ಮಾಸ, ಅಮಂಗಳಕರ ಮಾಸವೆಂದು ಕರೆಯಲಾಗುತ್ತದೆ.
ಆಷಾಢ ಮಾಸದಲ್ಲಿ ಹೆಣ್ಮಕ್ಕಳು ಗರ್ಭಿಣಿಯಾದರೆ ಅವರಿಗೆ ಏಪ್ರಿಲ್ ತಿಂಗಳಿನಲ್ಲಿ ಮಗು ಜನಿಸುತ್ತದೆ.
ಈ ಸಮಯದಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತದೆ. ಇದರಿಂದ ಮಗುವಿಗೆ ಅನೇಕ ರೋಗಗಳು ಬರಬಹುದು.
ಆಷಾಢದಲ್ಲಿ ಮಳೆ ಹೆಚ್ಚಾಗಿರುತ್ತದೆ. ನೀರಿನಿಂದ ಉಂಟಾಗುವ ಕಾಯಿಲೆಗಳು ಕೂಡ ಹೆಚ್ಚು.
ಈ ಸಮಯದಲ್ಲಿ ಹೊಸದಾಗಿ ಮದುವೆಯಾದ ದಂಪತಿ ಸದಾ ರೊಮ್ಯಾಂಟಿಕ್ ಮೂಡ್ನಲ್ಲಿರುತ್ತಾರೆ.
ಈ ಸೀಸನ್ನಲ್ಲಿ ಆಗುವ ವಾತಾವರಣ ಬದಲಾವಣೆಯಿಂದ ಪುರುಷರಲ್ಲಿ ಲೈಂಗಿಕ ವ್ಯತ್ಯಾಸವಾಗುತ್ತವೆ.
ಮಹಿಳೆಯರಲ್ಲಿ ಹಾರ್ಮೋನ್ ಮಟ್ಟಗಳು ವ್ಯತ್ಯಾಸವಾಗುತ್ತವೆ ಎಂದು ಹೇಳಲಾಗುತ್ತದೆ.