ಯಾರೇ ಕೂಗಾಡಲಿ ಇನ್ನು 7 ತಿಂಗಳು ಕಂಬಳದ ಕೋಣಗಳಿಗೆ ರೆಸ್ಟ್!

ಕರಾವಳಿಯಲ್ಲಿ ಇನ್ನೂ 7 ತಿಂಗಳು ಕಂಬಳವಿರಲ್ಲ, ಕೋಣಗಳಿಗೆ ಫುಲ್ ರೆಸ್ಟ್!

ಗುರುಪುರ ಕಂಬಳ ಕೊನೆಯ ಕಂಬಳವಾಗಿದ್ದು, ಮುಂದಿನ ಏಳು ತಿಂಗಳು ಕೋಣಗಳಿಗೆ ವಿಶ್ರಾಂತಿ ನೀಡಲಾಗುತ್ತದೆ.

ಗುರುಪುರದ ಅಡ್ಡೂರು-ಮುಳೂರು ಕಂಬಳ ಮೊದಲ ಬಾರಿ ನಡೆದಿದೆ.

ಕಂಬಳದಲ್ಲಿ ಒಟ್ಟು 105 ಜೊತೆ ಕೋಣಗಳು ಭಾಗವಹಿಸಿದ್ದವು.

ಬಿಸಿಲಿನ ನಡುವೆಯೂ ಕಂಬಳ ಕೋಣಗಳ ಮಾಲಕರು ಉತ್ಸಾಹದಿಂದಲೇ ಕಂಬಳ ಕೂಟದಲ್ಲಿ ಭಾಗವಹಿಸಿದ್ದರು.

ಬಿಸಿಲಿನ ಬೇಗೆ ತಣಿಸಲು ಕೋಣಗಳಿಗೆ ಸ್ನಾನ ಮಾಡಿಸಿ ಒದ್ದೆ ಬಟ್ಟೆಗಳನ್ನು ಮೈಗೆ ಹಾಕಲಾಗಿದೆ.

ಚುನಾವಣಾ ನೀತಿ ಸಂಹಿತೆಯಿದ್ದ ಕಾರಣ ಮೊದಲ ವರ್ಷದ ಕಂಬಳವನ್ನು ಅದ್ಧೂರಿಯಾಗಿ ನಡೆಸಲಾಗಿದೆ.

ನವೆಂಬರ್ 11 ರಂದು ಕಕ್ಕೆಪದವು ಕಂಬಳದ ಮೂಲಕ ಈ ಬಾರಿಯ ಕಂಬಳ ಋತುಗೆ ಚಾಲನೆ ನೀಡಲಾಗಿತ್ತು.

ಇದೀಗ ಗುರುಪುರ ಕಂಬಳ ಮುಕ್ತಾಯದೊಂದಿಗೆ ಪ್ರಸಕ್ತ ವರ್ಷದ ಕಂಬಳ ಋತು ಮುಕ್ತಾಯವಾಗಿದೆ.