ಗುಳೇದಗುಡ್ಡದಲ್ಲಿ 120 ವರ್ಷದಿಂದ ಜಗನ್ನಾಥ ಉತ್ಸವ ಆಚರಿಸಲಾಗುತ್ತಿದೆ.

ಒಡಿಶಾದ ಪುರಿಯ ಜಗನ್ನಾಥ ರಥಯಾತ್ರೆಯು ಭಾರೀ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಒಂಭತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಕರುನಾಡಿನ ಈ ಊರಲ್ಲಿ ಸಹ ಜಗನ್ನಾಥ ರಥಯಾತ್ರೆಯ ಸಂಭ್ರಮ ಕಳೆಗಟ್ಟಿದೆ.

ಮೂರು ದೇವತೆಗಳನ್ನು ಪ್ರತಿ ವರ್ಷ ಹೊಸದಾಗಿ ನಿರ್ಮಿಸಲಾದ ಮೂರು ಬೃಹತ್ ರಥಗಳಲ್ಲಿ ಕೊಂಡೊಯ್ಯಲಾಗುತ್ತದೆ.

ಜಗನ್ನಾಥನ ರಥವನ್ನು ನಂದಿಘೋಷ, ಬಲಭದ್ರನ ರಥವನ್ನು ತಾಳಧ್ವಜ ಮತ್ತು ಸುಭದ್ರೆಯ ರಥವನ್ನು ದರ್ಪದಲನ ಎಂದು ಕರೆಯುತ್ತಾರೆ.

ಜಗನ್ನಾಥ ರಥಯಾತ್ರೆಯ ಇತಿಹಾಸ ಮತ್ತು ಜಗನ್ನಾಥ ರಥಯಾತ್ರೆಯ ಕುರಿತು ಹಲವಾರು ದಂತಕಥೆಗಳಿವೆ.

ರಾಜ ಇಂದ್ರದ್ಯುಮ್ನ ಜಗನ್ನಾಥ ದೇವಾಲಯವನ್ನು ಸ್ಥಾಪಿಸಿದರು.

ಪುರಾಣಗಳ ಪ್ರಕಾರ ಭಗವಾನ್ ವಿಶ್ವಕರ್ಮ ಪ್ರತಿಮೆಗಳನ್ನು ಮರದ ದಿಮ್ಮಿಯಿಂದ ರಚಿಸಿದನು.

ಅವನು ವಿಗ್ರಹಗಳನ್ನು ರಚಿಸುವಾಗ ರಾಣಿ ಗುಂಡಿಚಾ ದೇವಾಲಯದ ಬಾಗಿಲನ್ನು ತೆರೆದಳು.

ಜಗದೀಶ್ ಪುರೋಹಿತ್, ಶಾಮಸುಂದರ ಪುರೋಹಿತ್  ನೇತೃತ್ವದಲ್ಲಿ ರಥಯಾತ್ರೆ ನಡೆದಿದೆ.

ರಥದಲ್ಲಿ ಜಗನ್ನಾಥನ ಉತ್ಸವ ಮೂರ್ತಿ ಇಟ್ಟು ರಥೋತ್ಸವ ನೆರವೇರಿಸಿದರು.