ಆಹಾ! ಹೂಗಳಿರುವ ಜಾಗದಲ್ಲೆಲ್ಲ ನೋಟುಗಳು! 

ಇಂತಹ ಅಲಂಕಾರ ನೋಡಲು ಸಿಗುವುದೇ ಅಪರೂಪ! 

ನೋಡಲು ಎರಡು ಕಣ್ಣು ಸಾಲದು ಅಷ್ಟು ಚಂದದ ಅಲಂಕಾರ

ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿರೋ ಅಂಬಾಭವಾನಿಗೆ ಮಾಡಿದ ಅತ್ಯಾಕರ್ಷಕ ನೋಟುಗಳ ಅಲಂಕಾರ ಭಾರೀ ಗಮನ ಸೆಳೆಯುತ್ತಿದೆ 

5 ರೂ. ನಾಣ್ಯ ಸೇರಿದಂತೆ 20, 50, 100, 200, 500 ರೂ. ಮುಖಬೆಲೆಯ ನೋಟುಗಳಿಂದ ದೇವಿಗೆ ಅಲಂಕಾರ ಮಾಡಲಾಗಿದೆ

ಶ್ರಾವಣ ಮಾಸದ ಕೊನೆಯ ಮಂಗಳವಾರದ ನಿಮಿತ್ತ ದೇವಿಗೆ ಅಲಂಕಾರ 5 ಲಕ್ಷ 61 ಸಾವಿರ ರೂ. ಮೌಲ್ಯದ ನೋಟು ಮತ್ತು ನಾಣ್ಯಗಳಿಂದ ಅಲಂಕಾರ ಮಾಡಲಾಗಿದೆ

ನಿನ್ನೆ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೋಟಿನ ಅಲಂಕಾರ ಮಾಡಲಾಗಿದ್ದು,

 6 ಮಹಿಳೆಯರು, 7 ಪುರುಷರು ಸೇರಿದಂತೆ 13 ಜನರು ಸೇರಿ ದೇವಿಗೆ ಅಲಂಕಾರ ಮಾಡಿದ್ದಾರೆ

ನೋಟುಗಳ ಅಲಂಕಾರ ಮಾಡಲೆಂದು ಕಳೆದ ಮೂರು ವಾರಗಳಿಂದ ನೋಟುಗಳನ್ನು ಜೋಡಿಸಲಾಗಿತ್ತು

ಭಕ್ತರು ಈ ಅಲಂಕಾರ ಕಣ್ತುಂಬಿಸಿಕೊಂಡು ಪಾವನರಾದರು