ಪುರಾಣ ಪ್ರಸಿದ್ಧ ಪುರಿ ಒಡಿಶಾ ಜಗನ್ನಾಥ ದೇಗುಲದ ರತ್ನ ಭಂಡಾರ ಓಪನ್ ಮಾಡಲಾಗಿದೆ.
46 ವರ್ಷಗಳ ಬಳಿಕ ರತ್ನಗಳ ಭಂಡಾರವನ್ನು ಧಾರ್ಮಿಕ ಕಾರ್ಯದ ಜೊತೆ ತೆರೆಯಲಾಗಿದೆ.
1978ರಲ್ಲಿ ಭಂಡಾರದ ಕೊಠಡಿ ತೆರೆಯಲಾಗಿತ್ತು. ಇದಾದ ನಂತರ ಕೊಠಡಿ ತೆರೆದಿರಲಿಲ್ಲ.
ಇದೀಗ ನಕಲಿ ಕೀಲಿ ಕೈ ಬಳಸಿ ಇಂದು ಭಂಡಾರವನ್ನು ಓಪನ್ ಮಾಡಲಾಯ್ತು.
ರತ್ನ ಭಂಡಾರದೊಳಗೆ ಚಿನ್ನಾಭರಣಗಳಿರುವ 15 ಪೆಟ್ಟಿಗೆ ಸೇರಿದಂತೆ ಅತ್ಯಮೂಲ್ಯ ಸಂಪತ್ತು ಸಿಕ್ಕಿದೆ.
ಜಗನ್ನಾಥನಿಗೆ ಪೂಜೆ ಸಲ್ಲಿಸಿ, ಆಡಳಿತ ಮಂಡಳಿ ಸದಸ್ಯರು ರತ್ನ ಭಂಡಾರದ ಬಾಗಿಲು ತೆರೆದರು.
ಪುರಿ ಜಗನ್ನಾಥನ ರತ್ನ ಭಂಡಾರದಲ್ಲಿ ಅಪಾರ ಪ್ರಮಾಣದ ಸಂಪತ್ತು ಸಿಕ್ಕಿದೆ ಎನ್ನಲಾಗಿದೆ.
ಚಿನ್ನಾಭರಣಗಳಿರುವ 15 ಪೆಟ್ಟಿಗೆ 9 ಅಡಿ ಅಗಲ ಮತ್ತು 3 ಅಡಿ ಎತ್ತರದ ಪೆಟ್ಟಿಗೆ, 128 ಕೆಜಿ ತೂಕದ 454 ಚಿನ್ನದ ಆಭರಣಗಳು
221 ಕೆಜಿ ತೂಕದ 293 ಬೆಳ್ಳಿ ಆಭರಣಗಳು ಭಂಡಾರದಲ್ಲಿ ಸಿಕ್ಕಿವೆ.
ರತ್ನಭಂಡಾರದ ಬಾಗಿಲು ಓಪನ್ ಮಾಡಿದ ಬಳಿಕ ಶಿಫ್ಟಿಂಗ್ ಸ್ಟ್ರಾಂಗ್ ರೂಮ್‌ಗೆ ರವಾನೆ ಮಾಡಲಾಗಿದೆ.
ಬೆಲೆಬಾಳುವ ರತ್ನ ಭಂಡಾರಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.