ಡಿವೋರ್ಸ್ ಬಳಿಕ ಸಿಟ್ಟಿನಲ್ಲಿ ಶೂಟಿಂಗ್ ಅಭ್ಯಾಸ, ಈಗ ಒಲಂಪಿಕ್ಸ್ ನಲ್ಲಿ ಪದಕವನ್ನೇ ಗೆದ್ದ!
ಮೆಕ್ಯಾನಿಕ್ ಆಗಿದ್ದ ಅವರು ಕೆಟ್ಟ ಮದುವೆಯಿಂದ ಹೊರ ಬಂದು ಶೂಟಿಂಗ್ ಕಲಿಯಲು ಶುರು ಮಾಡಿದರು.
ಅದು ಅವರನ್ನು ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವವರೆಗು ತಂದು ನಿಲ್ಲಿಸಿದೆ ಎನ್ನಲಾಗುತ್ತಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024 ಹಲವು ವಿಶೇಷತೆಗಳಿಂದ ಸಾಕಷ್ಟು ಗಮನ ಸೆಳೆಯುತ್ತಿದೆ.
ಶೂಟರ್ ಯಾವುದೇ ರಕ್ಷಣಾತ್ಮಕ, ವಿಶೇಷ ಲೆನ್ಸ್ಗಳನ್ನು ಧರಿಸದೆ ಶೂಟ್
ಮಾಡಿ ಮೆಡಲ್ ಗೆದ್ದಿದ್ದಾರೆ.
ಆ ಶೂಟರ್ ಹೆಸರು ಯೂಸುಫ್ ಡಿಕೆಕ್, ಇವರು ಟರ್ಕಿ ದೇಶದವರು.
10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
51 ವರ್ಷದ ಯೂಸುಫ್ ಡಿಕೆಕ್ ಅವರು ಎರಡೂ ಕಣ್ಣುಗಳನ್ನು ತೆರೆದು ಶೂಟ್ ಮಾಡಿದ್ದಾರೆ.
ಡಿಕೆಕ್ ನಾಲ್ಕು ಬಾರಿ ಒಲಿಂಪಿಕ್ಸ್ ನಲ್ಲಿ ಭಾಗಿಯಾಗಿದ್ದಾರೆ. 2008, 2012, 2016 ಮತ್ತು 2020 ರಲ್ಲಿ ಸ್ಪರ್ಧಿಸಿದ್ದಾರೆ.
ತಮ್ಮ ಶೂಟಿಂಗ್ ವಿಧಾನವನ್ನು “ಜಗತ್ತಿನಲ್ಲಿ ಅಪರೂಪದ ಶೂಟಿಂಗ್ ತಂತ್ರಗಳಲ್ಲಿ” ಒಂದು ಎಂದು ವಿವರಿಸಿದರು.