ಸಾನಿಯಾಗೆ ಡಿವೋರ್ಸ್, 3ನೇ ಮದ್ವೆಯಾದ ಮಲಿಕ್!

ಟೆನಿಸ್‌ ತಾರೆ ಸಾನಿಯಾಗೆ ಶಾಕ್, ಮತ್ತೊಂದು ಮದುವೆಯಾದ ಶೋಯೆಬ್ ಮಲಿಕ್‌

ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಇದ್ದಕ್ಕಿದ್ದಂತೆ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಶಾಕ್‌ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಾನಿಯಾ ಮಿರ್ಜಾ ಅವರ ವಿಚ್ಛೇದನದ ಬಗ್ಗೆ ದೀರ್ಘಕಾಲದಿಂದ ಊಹಾಪೋಹಗಳು ಇದ್ದವು.

ಆದರೆ ಈ ಬಗ್ಗೆ ಸಾನಿಯಾ-ಮಲಿಕ್ ಜೋಡಿ ಸರಿಯಾದ ಸ್ಪಷ್ಟನೆ ನೀಡಿರಲಿಲ್ಲ.

ಈ ಮಧ್ಯೆ ಶೋಯೆಬ್ ಮಲಿಕ್ ತನ್ನ ವಿವಾಹ ಸಮಾರಂಭದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ನಡುವೆ ವಿಚ್ಛೇದನದ ವದಂತಿಗಳು ತೀವ್ರಗೊಂಡಿತ್ತು.

ಶೋಯೆಬ್‌ ಮಲಿಕ್‌ಗೆ ಮೂರನೇ ಮದುವೆಯಾಗಿದ್ದು, ಸಾನಿಯಾ ಮಿರ್ಜಾಗೆ ಹೇಳದೇ ಮದುವೆಯಾದಂತೆ.

ಮೊದಲ ಹೆಂಡತಿಗೂ ಹೇಳದೆ ಸಾನಿಯಾ ಮಿರ್ಜಾರನ್ನು ಮದುವೆಯಾಗಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಟಿ20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಶತಕ ಸಿಡಿಸಿದ ರೋಹಿತ್ ಶರ್ಮಾ!