ಮೊಟ್ಟೆ ಮತ್ತು ಪನೀರ್ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್ ಎಂಬ ಗೊಂದಲ ಇರುತ್ತದೆ.
ಸಾಮಾನ್ಯವಾಗಿ ಮಾಂಸಹಾರಿಗಳು ಮೊಟ್ಟೆಯಲ್ಲಿ ಹೆಚ್ಚು ಪ್ರೋಟಿನ್ ಸಿಗುತ್ತದೆ ಎಂದರೆ.
ಕೆಲ ಸಸ್ಯಾಹಾರಿಗಳು ಪನ್ನೀರ್ ಲ್ಲಿ ಹೆಚ್ಚು ಪ್ರೋಟಿನ್ ಅಂಶವಿರುತ್ತದೆ ಎಂದು ಹೇಳುತ್ತಾರೆ.
ದೇಹಕ್ಕೆ ಸಾಕಷ್ಟು ಪ್ರೋಟೀನ್ ಬೇಕು. ಇದು ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
ಹಾಗಾಗಿ ಪೌಷ್ಟಿಕತಜ್ಞರು ಪ್ರತಿದಿನ ಪ್ರೋಟೀನ್ ಭರಿತ ಆಹಾರವನ್ನು ತಿನ್ನುವಂತೆ ಎಲ್ಲರಿಗೂ ಸಲಹೆ ನೀಡುತ್ತಾರೆ.
ಅದರಲ್ಲೂ ಮುಖ್ಯವಾಗಿ ಮೊಟ್ಟೆ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸುವಂತೆ ಶಿಫಾರಸ್ಸು ಮಾಡುತ್ತಾರೆ.
ಒಂದು ಮೊಟ್ಟೆಯು ಸುಮಾರು 6 ಗ್ರಾಂ ಪ್ರೋಟೀನ್ ಅನ್ನು ಒದಗಿಸಿದರೆ,
100 ಗ್ರಾಂ ಪನೀರ್ 18 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ದೇಹಕ್ಕೆ ಅಗತ್ಯವಿರುವ ಒಂಬತ್ತು ರೀತಿಯ ಅಮೈನೋ ಆಮ್ಲಗಳಿವೆ.
ಪನೀರ್ ಇದರಲ್ಲಿ ಪ್ರೊಟೀನ್ ಜೊತೆಗೆ ಕ್ಯಾಲ್ಸಿಯಂ ಕೂಡ ಅಧಿಕವಾಗಿರುತ್ತದೆ.
ಮೊಟ್ಟೆ ಮತ್ತು ಪನೀರ್ ಇವೆರಡರಲ್ಲಿ ಯಾವುದು ಉತ್ತಮ ಎಂದು ನಿರ್ಧರಿಸಲು ಸಾಧ್ಯವಾಗುವುದಿಲ್ಲ