ಒಲಿಂಪಿಕ್ಸ್‌ನಲ್ಲಿ ಹೊಸ ಇತಿಹಾಸ ಬರೆದ ಮನಿಕಾ ಬಾತ್ರಾ!
ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ!
ಮನಿಕಾ ಬಾತ್ರಾ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಭರವಸೆಯಲ್ಲಿದ್ದಾರೆ.
ದೇಶದ ಮಾಜಿ ನಂಬರ್ 1 ಟಿಟಿ ತಾರೆ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
32ರ ಸುತ್ತಿನ ಪಂದ್ಯದಲ್ಲಿ ಅವರು ಭಾರತೀಯ ಮೂಲದ ಫ್ರೆಂಚ್ ಆಟಗಾರ್ತಿ ಪ್ರಿತಿಕಾ ಪವಾಡೆರನ್ನು ಸೋಲಿಸಿದರು.
ಮನಿಕಾ ಕೊನೆಯ ಹದಿನಾರರೊಳಗೆ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಪ್ಯಾಡ್ಲರ್ ಎನಿಸಿಕೊಂಡರು.
37 ನಿಮಿಷದಲ್ಲಿ ಮನಿಕಾ ಪ್ರಿತಿಕಾ ಪವಾಡೆ ಅವರನ್ನು ಗೆಲುವನ್ನು ಕಸಿದುಕೊಂಡರು.
19ರ ಹರೆಯದ ಪ್ರಿತಿಕಾ ಅವರನ್ನು 11-9, 11-6, 11-9, 11-7 ಸೆಟ್‌ಗಳಿಂದ ಸೋಲಿಸಿದರು.
ಈ ಪಂದ್ಯವನ್ನು ಮನಿಕಾ ಬಾತ್ರಾ ಸತತ 4-0 ಅಂತರದಿಂದ ಗೆದ್ದುಕೊಂಡರು.
ಭಾರತದ ಮಹಿಳಾ ಆಟಗಾರ್ತಿಯೊಬ್ಬರು ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದು ಇತಿಹಾಸದಲ್ಲಿ ಇದೇ ಮೊದಲು.
ಮನಿಕಾ ಅವರ ಅದ್ಭುತ ಪ್ರದರ್ಶನ ಭಾರತದ ಮತ್ತೊಂದು ಪದಕದ ನಿರೀಕ್ಷೆಯನ್ನು ಹೆಚ್ಚಿಸಿದೆ.