ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ.
ಹರಿಯಾಣದ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
ಹರಿಯಾಣದಿಂದ ಅನೇಕ ಕ್ರೀಡಾಪಟುಗಳು ವಿಶ್ವದ ನಾನಾ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಮನು ಭಾಕರ್ ಓದುತ್ತಿದ್ದ ಸಮಯದಲ್ಲಿ ಟೆನ್ನಿಸ್, ಸ್ಕೇಟಿಂಗ್ ಮತ್ತು ಬಾಕ್ಸಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು.
ಮನು ಭಾಕರ್ ‘ತಂಗ್ ಟಾ’ ಎಂಬ ಸಮರ ಕಲೆ ಕಲಿತು ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಮನು ಭಾಕರ್ ಅವರು ಶೂಟಿಂಗ್ ಅನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸಿದರು.
ಮನು ಭಾಕರ್ ಅವರ ನಿವ್ವಳ ಮೌಲ್ಯ ಒಟ್ಟು 12 ಕೋಟಿ ರೂಪಾಯಿಗೂ ಹೆಚ್ಚಿದೆ.
ಹದಿಹರೆಯದಲ್ಲಿ ಮನು ರಾಷ್ಟ್ರೀಯ ಮತ್ತು ವಿಶ್ವ ಮಟ್ಟದ ಕ್ರೀಡೆಗಳಲ್ಲಿ ಹಲವು ದಾಖಲೆಗಳನ್ನು ಮುರಿದರು.
ಇನ್ ಸ್ಟಾಗ್ರಾಮ್ ನಲ್ಲೂ ಆಕೆಯ ಫಾಲೋಯಿಂಗ್ ಏಕಾಏಕಿ ಹೆಚ್ಚಿದ್ದು, ಈಗ ಈಕೆಯ ಕ್ರೇಜ್ ದೇಶಾದ್ಯಂತ ಹಬ್ಬುತ್ತಿದೆ.