ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವವು ನಿನ್ನೆ ಸಂಜೆ 5.30 ಗಂಟೆಗೆ ನಡೆದಿದೆ
ಈ ಹಿನ್ನೆಲೆ ಸಾವಿರಾರು ಭಕ್ತರು ಕೊಪ್ಪಳದತ್ತ ಮುಖ ಮಾಡಿದ್ದರು
ಲಕ್ಷಾಂತರ ಸಂಖ್ಯೆಯಲ್ಲಿ ಮಹಾರಥೋತ್ಸವಕ್ಕೆ ಭಕ್ತರು ಸಾಕ್ಷಿಯಾಗಿದ್ದರು
ಶುಕ್ರವಾರ ಸಾವಿರಾರು ಮಂದಿ ಕೊಪ್ಪಳಕ್ಕೆ ಬರಲು ಬೀಡು ಬಿಟ್ಟಿದ್ದರು
ರಾಜ್ಯ ಹಾಗೂ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣದಿಂದಲೂ ಭಕ್ತರು ಆಗಮಿಸಿದ್ದರು
ಸಂಜೆ 5.30 ಗಂಟೆಯ ವೇಳೆಗೆ ವಿಜೃಂಭಣೆಯಿಂದ ಮಹಾರಥೋತ್ಸವ ನಡೆದಿದೆ
ಶುಕ್ರವಾರ ಲಘು ರಥೋತ್ಸವ ನಡೆಯಿತು
ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು
ಮೈಸೂರು ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಮಹಾರಥೋತ್ಸವಕ್ಕೆ ಚಾಲನೆ ನೀಡಿದ್ದರು
ರಾತ್ರಿ 9.30 ರ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಠದ ಆವರಣ ಸಾಕ್ಷಿಯಾಯಿತು
ದುಡಿಯುವ ವ್ಯಕ್ತಿ ಮಾತ್ರ ಕೊನೆವರೆಗೂ ಬದುಕುತ್ತಾನೆ! ಜೀವನಕ್ಕೆ ಸ್ಪೂರ್ತಿ ಕೊಡುತ್ತೆ ಗವಿಮಠ ಶ್ರೀಗಳ ಈ ಮಾತು!